Asianet Suvarna News Asianet Suvarna News

'ನಮ್ಮನ್ನು ವಿಚಾರಣೆಗೆ ಕರೆದಿದ್ದಷ್ಟೇ, ಆರೋಪಿಗಳು ಎಂದು ಹೇಳಿಲ್ಲ, ಹಾಗೆ ತೋರಿಸಬೇಡಿ'

'ಬ್ರಹ್ಮಗಂಟು' ಧಾರಾವಾಹಿ ಖ್ಯಾತಿಯ ನಟಿ ಗೀತಾ ಭಟ್‌ಗೆ ISD ನೊಟೀಸ್ ನೀಡಿದೆ. ಇಂದು ಗೀತಾ ಭಟ್ ವಿಚಾರಣೆಗೆ ಹಾಜರಾಗಿದ್ದಾರೆ. 

ಬೆಂಗಳೂರು (ಸೆ. 22): 'ಬ್ರಹ್ಮಗಂಟು' ಧಾರಾವಾಹಿ ಖ್ಯಾತಿಯ ನಟಿ ಗೀತಾ ಭಟ್‌ಗೆ ISD ನೊಟೀಸ್ ನೀಡಿದೆ. ಇಂದು ಗೀತಾ ಭಟ್ ವಿಚಾರಣೆಗೆ ಹಾಜರಾಗಿದ್ದಾರೆ. 

'ಗಟ್ಟಿಮೇಳ' ನಟಿಯನ್ನು ISD ವಿಚಾರಣೆಗೆ ಕರೆದಿದ್ದು ಈ ಕಾರಣಕ್ಕೆ..!

ವಿಚಾರಣೆಗೂ ಮುನ್ನ ಮಾಧ್ಯಮದೆದುರು ಮಾತನಾಡುತ್ತಾ, ' 19 ನೇ ತಾರೀಖು ನನಗೆ ನೊಟೀಸ್ ಬಂದಿದೆ. ವಿಚಾರಣೆಗೆ ಕರೆದಿದ್ದಾರೆ. ನಾನವರಿಗೆ ಪೂರ್ತಿ ಸಪೋರ್ಟ್ ಮಾಡ್ತೀನಿ. ಅವರ ಎಲ್ಲಾ ಪ್ರಶ್ನೆಗಳಿಗೂ ಸಮರ್ಪಕ ಉತ್ತರ ನೀಡಿ ಸಹಕಾರ ನೀಡುತ್ತೇನೆ. ಅವರು ನಮ್ಮನ್ನು ವಿಚಾರಣೆಗೆ ಕರೆದಿದ್ದಾರೆ. ಆರೋಪಿ ಎಂದು ಹೇಳಿಲ್ಲ. ಎಲ್ಲಾ ಮಾಧ್ಯಮಗಳಲ್ಲೂ ನಮ್ಮನ್ನು ಆರೋಪಿ ಎನ್ನುವ ಹಾಗೆ ತೋರಿಸಲಾಗುತ್ತಿದೆ. ಇದು ಸರಿಯಲ್ಲ.  ವಿಚಾರಣೆ ಮುಗಿಸಿಕೊಂಡು ಬರ್ತೀನಿ' ಎಂದು ಹೇಳಿದರು. 
 

Video Top Stories