'ಗಟ್ಟಿಮೇಳ' ನಟಿಯನ್ನು ISD ವಿಚಾರಣೆಗೆ ಕರೆದಿದ್ದು ಈ ಕಾರಣಕ್ಕೆ..!
ಕನ್ನಡ ಸೀರಿಯಲ್ ಸ್ಟಾರ್‌ಗಳಿಗೆ ಡ್ರಗ್ ಡ್ರಿಲ್ ಶುರುವಾಗಿದೆ. 'ಬ್ರಹ್ಮಗಂಟು' ಧಾರಾವಾಹಿ ಖ್ಯಾತಿಯ ಗೀತಾ ಭಾರತಿ ಭಟ್, 'ಗಟ್ಟಿಮೇಳ' ಖ್ಯಾತಿಯ ಅಭಿಷೇಕ್ ಹಾಗೂ ನಟಿ ರಶ್ಮಿತಾಗೆ ISD ವಿಚಾರಣೆಗೆ ಕರೆದಿದೆ.
ಬೆಂಗಳೂರು (ಸೆ. 22): ಕನ್ನಡ ಸೀರಿಯಲ್ ಸ್ಟಾರ್‌ಗಳಿಗೆ ಡ್ರಗ್ ಡ್ರಿಲ್ ಶುರುವಾಗಿದೆ. 'ಬ್ರಹ್ಮಗಂಟು' ಧಾರಾವಾಹಿ ಖ್ಯಾತಿಯ ಗೀತಾ ಭಾರತಿ ಭಟ್, 'ಗಟ್ಟಿಮೇಳ' ಖ್ಯಾತಿಯ ಅಭಿಷೇಕ್ ಹಾಗೂ ನಟಿ ರಶ್ಮಿತಾಗೆ ISD ವಿಚಾರಣೆಗೆ ಕರೆದಿದೆ.
ನಟಿ ರಶ್ಮಿತಾ ಚೆಂಗಪ್ಪ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. 'ನನಗೆ ಕಳೆದ ವಾರವೇ ನೊಟೀಸ್ ಬಂದಿತ್ತು. ವಿಚಾರಣೆ ಕೂಡಾ ಮುಗಿದಿದೆ. ನಾನೊಂದಷ್ಟು ಸೀರಿಯಲ್‌ಗಳಲ್ಲಿ ನಟಿಸಿದ್ದೇನೆ. ಸಾಕಷ್ಟು ಪಾರ್ಟಿಗಳಲ್ಲಿ ಕಾಣಿಸಿಕೊಳ್ಳುತ್ತೇವೆ. 'ನೀವು ಪಾರ್ಟಿಗಳಲ್ಲಿ, ಈವೆಂಟ್‌ಗಳಲ್ಲಿ ಕಾಣಿಸಿಕೊಳ್ಳುತ್ತೀರಿ. ಆ ಪಾರ್ಟಿಗಳಲ್ಲಿ ಡ್ರಗ್ಸ್ ಸೇವನೆ ಬಗ್ಗೆ ನಿಮಗೆ ಗೊತ್ತಿದ್ದರೆ ಹೇಳಿ' ಎಂದು ವಿಚಾರಣೆಯಲ್ಲಿ ಕೇಳಿದ್ದಾರೆ. ಅದು ಅವರ ಕರ್ತವ್ಯ. ನಾನು ಕೂಡಾ ಸಹಕರಿಸಿದ್ದೇನೆ' ಎಂದು ರಶ್ಮಿತಾ ಹೇಳಿದ್ದಾರೆ.
'ನಾನು ಸಾಕಷ್ಟು ಪಾರ್ಟಿ, ಈವೆಂಟ್‌ಗಳಲ್ಲಿ ಭಾಗಿಯಾಗಿದ್ದೇನೆ. ಎಲ್ಲಿಯೂ ಡ್ರಗ್ಸ್ ಸೇವನೆ ಗಮನಕ್ಕೆ ಬಂದಿಲ್ಲ' ಎಂದು ರಶ್ಮಿತಾ ಸ್ಪಷ್ಟಪಡಿಸಿದ್ಧಾರೆ.