ನಮ್ಮ ನಾಯಕರಾದ ಡಿಕೆ ಶಿವಕುಮಾರ್‌, ನನ್ನ ಮೇಲೆ ಸುಳ್ಳು ಆರೋಪ ಮಾಡಲಾಗಿದೆ:ಶ್ರೇಯಸ್ ಪಟೇಲ್

ಮೊದಲಬಾರಿಗೆ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಮಾಧ್ಯಮಗಳ ಮುಂದೆ ಬಂದಿದ್ದು, ವಕೀಲ ದೇವರಾಜೇಗೌಡ ಆರೋಪಗಳಿಗೆ ತಿರುಗೇಟು ನೀಡಿದ್ದಾರೆ. ನಮ್ಮ ನಾಯಕರಾದ ಡಿಕೆ ಶಿವಕುಮಾರ್ ಹಾಗೂ ನಮ್ಮ ಮೇಲೆ ಸುಳ್ಳು ಆರೋಪ ಮಾಡಿದ್ದಾರೆ ಎಂದಿದ್ದಾರೆ.

First Published May 7, 2024, 12:43 PM IST | Last Updated May 7, 2024, 12:44 PM IST

ಪ್ರಜ್ವಲ್ ರೇವಣ್ಣ (Prajwal Revanna) ಅವರದ್ದು ಎನ್ನಲಾದ ವಿಡಿಯೋ ವೈರಲ್ ವಿಚಾರದಲ್ಲಿ ಮೊದಲಬಾರಿಗೆ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ (Congress candidate Shreyas Patel) ಮಾಧ್ಯಮಗಳ ಮುಂದೆ ಬಂದಿದ್ದಾರೆ. ವಕೀಲ ದೇವರಾಜೇಗೌಡ ಆರೋಪಗಳ ಸುರಿಮಳೆ ಮಾಡಿದ ಹಿನ್ನೆಲೆ, ಬಿಜೆಪಿ ಮುಖಂಡ ದೇವರಾಜೇಗೌಡ (Devarajegowda) ಇಲ್ಲ ಸಲ್ಲದ ಆರೋಪ ಮಾಡಿದ್ದಾರೆ, ನಮ್ಮ ನಾಯಕರಾದ ಡಿಕೆ ಶಿವಕುಮಾರ್ (DK Shivakumar) ಹಾಗೂ ನಮ್ಮ ಮೇಲೆ ಸುಳ್ಳು ಆರೋಪ ಮಾಡಿದ್ದಾರೆ,  ನಾನು ಯಾರನ್ನು ಕೂಡ ಭೇಟಿ ಮಾಡಿಲ್ಲ, ನಾನು ಬಹಿರಂಗ ಚರ್ಚೆಗೆ ಅವರನ್ನು ಆಹ್ವಾನ ಮಾಡುತ್ತೇನೆ ಎಂದಿದ್ದಾರೆ. 

ನಾನು ಭೇಟಿಯಾಗಿರೋದು ನಿಜ ಇದ್ದರೆ ದಾಖಲೆ ನೀಡಲಿ, ನನ್ನ ಪಾತ್ರ ಇದ್ದರೆ ನಾನು ರಾಜಕೀಯದಿಂದ ಹಿಂದೆ ಸರಿಯುತ್ತೇನೆ. ಹಾಗೆಯೇ ಅವರ ಆರೋಪ ನಿಜವಾದರೆ ಜೂನ್ 4 ರಂದು ನಾನು ಗೆದ್ದರೆ ರಾಜೀನಾಮೆ ನೀಡುತ್ತೇನೆ. ಒಬ್ಬರ ತೇಜೋವಧೆ ಮಾಡೋದು ಸರಿಯಲ್ಲ, ಆರು ತಿಂಗಳ ಹಿಂದೆ ಇದೇ ದೇವರಾಜೇಗೌಡ ವಿಡಿಯೋ ಲೀಕ್‌ ಮಾಡುವ ಸವಾಲು ಹಾಕಿದ್ದರು. ತಾನು ತಿಂದು ಬೇರೆಯವರ ಮೇಲೆ ಹೊರಿಸೊ ಕೆಲಸ ಮಾಡ್ತಾ ಇದ್ದಾರೆ, ಎಸ್ ಐ ಟಿ ತನಿಖೆ ವೇಳೆ ಹೀಗೆ ಹೇಳಿಕೆ ನೀಡಿ ತನಿಖೆ ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ. 

ಅಲ್ಲದೆ ಅವರು ಮಾಡೊ ಆರೋಪಕ್ಕೆ ದಾಖಲೆ ಕೊಡಲಿ, ಇದರ ವಿರುದ್ಧ ನಾನು ಮಾನನಷ್ಠ ಮೊಕದ್ದಮೆ ಹೂಡುತ್ತೇನೆ, ನನ್ನ ಹೆಸರಿಗೆ ಕಳಂಕ ತರುವ ಕೆಲಸವನ್ನು ಈ ವ್ಯಕ್ತಿ ಮಾಡುತ್ತಿದ್ದಾರೆ, ಆ ಪೆನ್ ಡ್ರೈವ್ ಬಗ್ಗೆ ಮಾತನಾಡಲು ಅಸಹ್ಯ ಆಗುತ್ತದೆ, ನಾನು ಗೌರವಾನ್ವಿತ ಕುಟುಂಬ ದಿಂದ ಬಂದವನು, ಸರಿಯಾದ ದಿಕ್ಕಿನಲ್ಲಿ ತನಿಖೆ ನಡೆಯಲಿ, ಈ ದೇವರಾಜೇಗೌಡ ಗೊಜ್ಜೆ ರಾಜಕಾರಣ ಮಾಡುತ್ತಿದ್ದಾರೆ, ನಮ್ಮ ಡಿಸಿಎಂ ಬಗ್ಗೆ ಅವರು ಮಾತನಾಡಿದ್ದು, ಇದು ಖಂಡನೀಯ, ಈ ಪ್ರಕರಣ ದಲ್ಲಿ ಅವರ ಪಾತ್ರ ಏನು ಇಲ್ಲ ಎಂದ  ಶ್ರೇಯಸ್‌ ನನ್ನ ಮೇಲೆ ಯಾಕೆ ಆರೋಪ ಮಾಡುತ್ತಿದ್ದಾರೊ ಗೊತ್ತಿಲ್ಲ ಎಂದಿದ್ದಾರೆ.

ಇದನ್ನೂ ವೀಕ್ಷಿಸಿ:  ರಾಜಕೀಯಕ್ಕೆ ಹೆಣ್ಣು ಮಕ್ಕಳ ಫೋಟೋ ಸೇಲ್‌: ‘ಲುಲು’ಕುಮಾರ ಎಂದು ಸಿಎಂ, ಡಿಸಿಎಂ ವಿರುದ್ಧ ಪೋಸ್ಟರ್‌