Renukaswamy Murder Case: ರಾಜು ಎಂಬಾತನ ಬಳಿಯಿದ್ದ ಮೆಗ್ಗಾರ್‌ನಿಂದ ರೇಣುಕಾಸ್ವಾಮಿಗೆ ಶಾಕ್..!

ಮೆಗ್ಗಾರ್‌ ಆನ್‌ಲೈನ್‌​ನಲ್ಲಿ ತರಿಸಿಕೊಂಡಿದ್ದ ಎಂಬುದು ಪತ್ತೆ
ಆರೋಪಿಗಳು ನಿರಂತರವಾಗಿ ಮೆಗ್ಗಾರ್ ಬಳಸಿದ್ದ ಬಗ್ಗೆ ಸಾಕ್ಷಿ
ಚೇರ್‌ಗೆ ಕಟ್ಟಿ ಕೂರಿಸಿ ನಂತರ ಶಾಕ್ ನೀಡ್ತಿದ್ದ ಆರೋಪಿಗಳು

Share this Video
  • FB
  • Linkdin
  • Whatsapp

ದರ್ಶನ್(Darshan) ಗ್ಯಾಂಗ್‌​​ನಿಂದ ರೇಣುಕಾಸ್ವಾಮಿ ಹತ್ಯೆ ಪ್ರಕರಣ(Renukaswamy murder Case) ರಾಜು ಎಂಬಾತನ ಬಳಿಯಿದ್ದ ಮೆಗ್ಗಾರ್‌ನಿಂದ(Meggar) ಶಾಕ್ ನೀಡಲಾಗಿದೆ ಎಂಬ ವಿಷಯ ತಿಳಿದುಬಂದಿದೆ. ಪ್ರಕರಣದ 9ನೇ ಆರೋಪಿ ಆರ್ ಆರ್ ನಗರ ನಿವಾಸಿ ರಾಜು ಆಗಿದ್ದಾನೆ. ಎಲೆಕ್ಟ್ರಿಕ್ ಡಿವೈಸ್ ಬಳಸಿ ಶಾಕ್ ನೀಡಲಾಗಿದೆಯಂತೆ. ಮೆಗ್ಗಾರ್‌ನ​​ನ್ನು ಕಳೆದ ಹಲವು ತಿಂಗಳಿಂದ ರಾಜು ಜೊತೆಗೆ ಇಟ್ಟುಕೊಂಡಿದ್ದ. ಈ ಹಿಂದೆಯೂ ಹಲವರಿಗೆ ಶಾಕ್ ನೀಡಿದ್ದಾನೆ ಎನ್ನಲಾಗ್ತಿದೆ. ಮೆಗ್ಗಾರ್‌ನನ್ನು ಆನ್‌ಲೈನ್‌ನಲ್ಲಿ ತರಿಸಿಕೊಂಡಿದ್ದು,ನಿರಂತರವಾಗಿ ಇದನ್ನು ಬಳಸಿದ್ದ ಬಗ್ಗೆ ಸಾಕ್ಷಿಗಳು ದೊರೆತಿವೆ. ಅಲ್ಲದೇ ಚೇರ್‌ಗೆ ಕಟ್ಟಿ ಕೂರಿಸಿ ಶಾಕ್‌ ನೀಡ್ತಿದ್ದರು ಎಂದು ತಿಳಿದುಬಂದಿದೆ. ದರ್ಶನ್ ಮನೆಯಲ್ಲಿ ರಾಜು ಕೆಲಸ ಮಾಡಿಕೊಂಡಿದ್ದು, ನಟನ ನಿವಾಸದಲ್ಲಿ ಇದ್ದ ನಾಯಿಗಳನ್ನು ನೋಡಿಕೊಳ್ತಿದ್ದ. ರಾಜು ಬಂಧನದಿಂದ ಪ್ರಕರಣದಲ್ಲಿ ಮತ್ತಷ್ಟು ಬಲವಾದ ಸಾಕ್ಷ್ಯ ದೊರೆತಂತೆ ಆಗಿದೆ.

ಇದನ್ನೂ ವೀಕ್ಷಿಸಿ: ರೇಣುಕಾಸ್ವಾಮಿ ಕೊಲೆ ಪ್ರಕರಣ: 19 ಜನರ ಪೈಕಿ 8 ಮಂದಿಗೆ ದರ್ಶನ್ ಪರಿಚಯವೇ ಇರಲಿಲ್ವಾ ?

Related Video