ಸಮಾಧಿ ಶೋಧ 2ನೇ ದಿನವೂ ಸಿಗದ ಕಳೇಬರ ಮೂರನೇ ದಿನವೂ ಮುಂದುವರಿದ ಶೋಧ

ಧರ್ಮಸ್ಥಳದಲ್ಲಿ ಅನಾಮಿಕ ದೂರಿನ ಹಿನ್ನೆಲೆಯಲ್ಲಿ ಎರಡನೇ ದಿನವೂ ಶೋಧ ಕಾರ್ಯ ಮುಂದುವರೆದಿದೆ. ಐದು ಸ್ಥಳಗಳಲ್ಲಿ ಹುಡುಕಾಟ ನಡೆಸಿದರೂ ಶವದ ಕುರುಹು ಪತ್ತೆಯಾಗಿಲ್ಲ, ಇದರಿಂದಾಗಿ ಜನರಲ್ಲಿ ಕುತೂಹಲ ಹೆಚ್ಚಾಗಿದೆ.

Share this Video
  • FB
  • Linkdin
  • Whatsapp

ಅನಾಮಿಕ ದೂರುದಾರನ ಆರೋಪದ ಮೇಲೆ ನಿನ್ನೆ 2ನೇ ದಿನವೂ ಧರ್ಮಸ್ಥಳದಲ್ಲಿ ನಡೆದ ಶೋಧ ಕಾರ್ಯಾಚರಣೆಯಲ್ಲಿ ಯಾವುದೇ ಶವಗಳ ಕುರುಹು ಪತ್ತೆಯಾಗಿಲ್ಲ. ಆದರೂ ಎಸ್‌ಐಟಿ ಅಧಿಕಾರಿಗಳು ಇಂದು ಕೂಡ ಶೋಧ ಮುಂದುವರೆಸಿದ್ದಾರೆ. ಅನಾಮಿಕ ಗುರುತಿಸಿದ್ದ ಸ್ಥಳದಲ್ಲಿ ನಿನ್ನೆಯೂ ಶೋಧ ಕಾರ್ಯ ಕಾರ್ಯ ನಡೆದಿದ್ದು, ಒಟ್ಟು 5 ಜಾಗಗಳಲ್ಲಿ ಶವಕ್ಕಾಗಿ ಗುಂಡಿ ತೆಗೆಯಲಾಗಿತ್ತು. ಆದರೆ ಎಲ್ಲೂ ಶವಗಳ ಕುರುಹು ಪತ್ತೆಯಾಗಿಲ್ಲ, ಹಾಗಾಗಿ ಇಂದಿನ ಕಾರ್ಯಾಚರಣೆ ಜನರಲ್ಲಿ ಮತ್ತಷ್ಟು ಕುತೂಹಲ ಹೆಚ್ಚಿಸಿದೆ. ಈ ಬಗ್ಗೆ ಡಿಟೇಲ್ ರಿಪೋರ್ಟ್ ಇಲ್ಲಿದೆ. 

Related Video