Asianet Suvarna News Asianet Suvarna News

ಸ್ಯಾಂಟ್ರೋ ರವಿ ಪ್ರಕರಣ: ಹಿರಿಯ ಅಧಿಕಾರಿಗಳ ಹೆಸರು ಬಹಿರಂಗ

ಸ್ಯಾಂಟ್ರೋ ರವಿ ಪ್ರಕರಣವು ಪೊಲೀಸ್‌ ಇಲಾಖೆಗೆ ಬಿಸಿ ತುಪ್ಪವಾಗಿದ್ದು, ಸುತ್ತಿ ಬಳಸಿ ಪೊಲೀಸರ ಬುಡಕ್ಕೆ ಪ್ರಕರಣದ ತನಿಖೆ ಬರ್ತಿದೆ. 
 

ಪತ್ನಿಗೆ ಕಿರುಕುಳ ನೀಡಿದ ಆರೋಪದಡಿ ತನಿಖೆ ಎದುರಿಸುತ್ತಿರುವ ಸ್ಯಾಂಟ್ರೋ ರವಿ ಪ್ರಕರಣದಲ್ಲಿ ಹಿರಿಯ ಅಧಿಕಾರಿಗಳ ಹೆಸರು ಬಯಲಾಗಿದೆ. ಕಾಟನ್‌ ಪೇಟೆ ಸುಳ್ಳು ಕೇಸ್‌'ನಲ್ಲೂ ಹಿರಿಯ ಅಧಿಕಾರಿಗಳ ಹೆಸರು ಬಹಿರಂಗ ಆಗಿದೆ. ಇನ್ಸ್‌ಪೆಕ್ಟರ್‌ ಪ್ರವೀಣ್‌ ಅವರನ್ನು ಸಿಸಿಬಿ ಟೀಂ ವಿಚಾರಣೆ ನಡೆಸುತ್ತಿದ್ದು, ಹಿರಿಯ ಅಧಿಕಾರಿಗಳ ಒತ್ತಡದಿಂದ ಸುಳ್ಳು ಕೇಸ್‌ ದಾಖಲಿಸಿದ್ದೆ ಎಂದು ಪ್ರವೀಣ್‌ ಹೇಳಿಕೆ ನೀಡಿದ್ದಾರೆ. ತನಿಖೆಯ ವೇಳೆ ಸ್ಯಾಂಟ್ರೋ ರವಿಯ ಜತೆ ಹಿರಿಯ ಅಧಿಕಾರಿಗಳ ನಂಟು ಬಯಲಾಗುತ್ತಿದ್ದು, ತನಿಖೆ ಎತ್ತ ಸಾಗಬೇಕು ಅನ್ನೋದೇ ತನಿಖಾಧಿಕಾರಿಗಳಿಗೆ ದೊಡ್ಡ ಪ್ರಶ್ನೆಯಾಗಿದೆ. ಸ್ಯಾಂಟ್ರೋ ಪತ್ನಿಯ ಹೇಳಿಕೆ ಪಡೆದು ಕೈ ತೊಳೆದುಕೊಂಡ್ರಾ ತನಿಕಾಧಿಕಾರಿಗಳು ಎಂಬ ಅನುಮಾನ ಮೂಡಿದ್ದು, ಲಗ್ನ ಪತ್ರಿಕೆ ಹಾಗೂ ರವಿಯೊಂದಿಗಿನ ಫೋಟೋವನ್ನು ಆತನ ಪತ್ನಿ ಸಲ್ಲಿಸಿದ್ದಾರೆ. ಬೆಂಗಳೂರು ಹಾಗೂ ಮೈಸೂರಿನ 5 ರಾಣೆಗಳಲ್ಲಿ ಸುಳ್ಳು ದೂರು ದಾಖಲಾಗಿದೆ.

Video Top Stories