ಸಂತೋಷ್ ಪಾಟೀಲ್ ಆತ್ಮಹತ್ಯೆ ಕೇಸ್: ಈಶ್ವರಪ್ಪ ಪಿಎಗೂ ಸಿಕ್ಕಿತ್ತು ಕಮಿಷನ್

ಮಾಜಿ ಸಚಿವ ಈಶ್ವರಪ್ಪ ವಿರುದ್ಧ ಆರೋಪ ಮಾಡಿದ್ದ ಗುತ್ತಿಗೆದಾರ‌ ಸಂತೋಷ ಪಾಟೀಲ್ ಯಾರಿಗೆಲ್ಲಾ ಕಮಿಷನ್‌ ಕೊಟ್ಟಿದ್ರು ಎಂಬ ಮಾಹಿತಿ ಇದೀಗ ಬಹಿರಂಗವಾಗಿದೆ. 
 

First Published Jan 6, 2023, 12:48 PM IST | Last Updated Jan 6, 2023, 1:12 PM IST

ಮಾಜಿ ಸಚಿವ ಕೆ‌.ಎಸ್ ಈಶ್ವರಪ್ಪ ಪಿಎ ಸೇರಿ ಹಲವರಿಗೆ ಸಂತೋಷ ಪಾಟೀಲ್ ಕಮಿಷನ್ ಕೊಟ್ಟಿದ್ದರು ಎಂಬ ಮಾಹಿತಿ ಹೊರ ಬಿದ್ದಿದೆ. ಸಿವಿಲ್ ವರ್ಕ್ ಮಾಡಿಸಿದ್ದ ಗ್ರಾಮ ಪಂಚಾಯತಿ ಚೇರ್ಮನ್ ನಾಗೇಶ್ ಮನೋಲ್ಕರ್ ಜೊತೆ ಚಾಟ್ ನಡೆಸಲಾಗಿದ್ದು, ಪೊಲೀಸರು ಕೋರ್ಟ್‌ಗೆ ಕೊಟ್ಟ ಬಿ ರಿಪೋರ್ಟ್‌ನಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರ ಜೊತೆಗಿನ ಚಾಟ್ ಉಲ್ಲೇಖವಾಗಿದೆ. ಈಶ್ವರಪ್ಪ ಪಿಎಗೂ  25 ಸಾವಿರ ಕೊಟ್ಟಿರುವುದಾಗಿ ಚಾಟ್ ಆಗಿದ್ದು, ಬಿಲ್‌ ಕಮಿಷನ್‌ ಅಂತ 4.15 ಲಕ್ಷ ಕೊಟ್ಟಿರುವುದಾಗಿ ಚಾಟ್‌ನಲ್ಲಿ ಉಲ್ಲೇಖವಾಗಿದೆ. ಇನ್ನು ಸಂತೋಷ್ ಪಾಟೀಲ್‌ ಕೆಲಸ ಮಾಡಿಕೊಡಲು ಈಶ್ವರಪ್ಪ ಪಿಎಗೆ ಕವರ್ ಕೊಡಲಾಗಿತ್ತು ಎಂದು ಉಡುಪಿ ಪೊಲೀಸರ ಮುಂದೆ ಮಹಾಂತೇಶ ಶಾಸ್ತ್ರೀ ಎಂಬುವವರು ಹೇಳಿಕೆ ನೀಡಿದ್ದಾರೆ.