Asianet Suvarna News Asianet Suvarna News

ರಾಗಿಣಿ ದ್ವಿವೇದಿ ಸಿಸಿಬಿ ಕಸ್ಟಡಿ ಇಂದು ಮುಕ್ತಾಯ; ಮತ್ತೆ ಪೊಲೀಸ್ ವಶಕ್ಕೆ ಸಾಧ್ಯತೆ?

Sep 7, 2020, 9:40 AM IST

ಬೆಂಗಳೂರು (ಸೆ. 07): ಡ್ರಗ್ ಮಾಫಿಯಾ ಕೇಸ್‌ನಲ್ಲಿ ವಿಚಾರಣೆಗೆ ಒಳಪಟ್ಟಿರುವ ರಾಗಿಣಿ ದ್ವಿವೇದಿ ಸಿಸಿಬಿ ಕಸ್ಟಡಿ ಇಂದು ಮುಕ್ತಾಯವಾಗಲಿದೆ. ಸಂಜೆ ನ್ಯಾಯಾಲಯಕ್ಕೆ ಸಿಸಿಬಿ ಪೊಲೀಸರು ಹಾಜರುಪಡಿಸುವ ಸಾಧ್ಯತೆ ಇದೆ. 

ಪ್ರಕರಣದಲ್ಲಿ ರಾಗಿಣಿ ಸಹಕರಿಸದೇ ಇರುವುದು ಹಾಗೂ ಹೆಚ್ಚಿನ ಮಾಹಿತಿ ಕಲೆ ಹಾಕಬೇಕಿರುವ ಹಿನ್ನಲೆಯಲ್ಲಿ ಪುನಃ ಆರೋಪಿಯನ್ನು ಪೊಲೀಸ್ ವಶಕ್ಕೆ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಲಾಗುವುದು ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ. 

ಡ್ರಗ್ ಮಾಫಿಯಾ: ಮತ್ತೋರ್ವ ನಟಿಗೆ ಶುರುವಾಯ್ತು ಟೆನ್ಷನ್..!