Asianet Suvarna News Asianet Suvarna News

ಸಂಬಂಧಿ ಮೇಲೆ ಹಲ್ಲೆ ಮಾಡಿದ್ರಾ ರಾಜು  ತಾಳಿಕೋಟೆ? ಏನಿದು ಪ್ರಕರಣ

Sep 14, 2021, 5:47 PM IST

 

ವಿಜಯಪುರ(ಸೆ. 14) ಹಾಸ್ಯನಟ ರಾಜು ತಾಳಿಕೋಟೆ  ತಮ್ಮ ಸಂಬಂಧಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಅಕ್ಕನ ಮಗನ ಪತ್ನಿ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂಬ ಆರೋಪ ಕೇಳಿ  ಬಂದಿದೆ.

ಮಹಿಳೆಯನ್ನು ಬೆತ್ತಲಾಗಿ ಹಿಂಸಿಸಿದ  ಯಾದಗಿರಿಯ ಭಯಾನಕ ಕೃತ್ಯದ ಹಿಂದಿನ ಕಿರಾಕರು

ಸನಾ ಕರಜಗಿ ಎಂಬ ಮಹಿಳೆ ಮೇಲೆ ಹಲ್ಲೆ ಮಾಡಿದ್ರಾ? ಎಂಬ ಪ್ರಶ್ನೆ ಎದ್ದಿದೆ. ಇನ್ನೊಂದು ಕಡೆ ರಾಜು ತಾಳಿಕೋಟೆ ಸಹ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು ತಮಗೂ ಜೀವ ಬೆದರಿಕೆ ಇದೆ ಎಂದಿದ್ದಾರೆ. ಅಕ್ಕನ ಮಗನ ಹೆಂಡತಿ ಅಕ್ರಮ ಸಂಬಂಧ ಹೊಂದಿದ್ದಳು ಎಂಬುದು ಈ ಘಟನೆಗೆ ಮೂಲ ಕಾರಣ.  ಹಲ್ಲೆಗೆ ಒಳಗಾಗಿದ್ದಾರೆ ಎನ್ನುವ ಮಹಿಳೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು.