ಕಿಚ್ಚ ಸುದೀಪ್‌ಗೆ ಬೆದರಿಕೆ ಪತ್ರ: ಸಿಸಿಬಿಗೆ ಸಿಕ್ಕಿದೆ ಪ್ರಮುಖ ಸುಳಿವು..!

ಸ್ಯಾಂಡಲ್‌ವುಡ್‌ ನಟ ಕಿಚ್ಚ ಸುದೀಪ್‌ಗೆ ಅನಾಮಧೇಯ ಬೆದರಿಕೆ ಪತ್ರ ಬಂದಿದ್ದು, ಈ ಸಂಬಂಧ ಸಿಸಿಬಿ ದೂರು ದಾಖಲಿಸಿಕೊಂಡಿದೆ. ಹಾಗೆ, ಕಿಚ್ಚನ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಳ್ಳಲಿದ್ದಾರೆ. 

First Published Apr 6, 2023, 10:00 AM IST | Last Updated Apr 6, 2023, 10:00 AM IST

ಖ್ಯಾತ ನಟ ಕಿಚ್ಚ ಸುದೀಪ್‌ ಬಸವರಾಜ ಬೊಮ್ಮಾಯಿ ಅವರಿಗೆ ಬೆಂಬಲ ಘೋಷಿಸುವ ಮುನ್ನವೇ ಅವರ ಮನೆಗೆ ಬೆದರಿಕೆ ಪತ್ರ ಬಂದಿತ್ತು. ಈ ಸಂಬಂಧ ಸಿಸಿಬಿ ದೂರು ದಾಖಲಿಸಿಕೊಂಡಿದ್ದು, ಕಿಚ್ಚನ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. ಪತ್ರ ಬರೆದವರು ಯಾರು ಅಂತ ಗೊತ್ತು ಎಂದು ನಟ ಸುದೀಪ್‌ ಬುಧವಾರ ಹೇಳಿಕೆ ನೀಡಿದ್ದರು. ಚಿತ್ರರಂಗದವರೇ ಎಂದಿದ್ರು. ಇನ್ನು, ನಟನ ಮಾಜಿ ಡ್ರೈವರ್‌ ಜೊತೆ ಸೇರಿ ವಿರೋಧಿಗಳು ಷಡ್ಯಂತ್ರ ರೂಪಿಸಿದ್ರಾ ಅನ್ನೋ ಅನುಮಾನ ಇದ್ದು, ಈ ಹಿನ್ನೆಲೆ ಕಿಚ್ಚನ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಳ್ಳಲಿದ್ದಾರೆ. 
 

Video Top Stories