ಬಿಜೆಪಿ ಮೂಲಕ ರಾಜಕೀಯ ಎಂಟ್ರಿಗೆ ರೌಡಿ ಸೈಲೆಂಟ್ ಸುನೀಲ ಸಿದ್ಧತೆ? ಯಾವ ಕ್ಷೇತ್ರ?
ರಾಜ್ಯದ ಸಿಸಿಬಿ ಪಟ್ಟಿಯಲ್ಲಿರುವ ಸೈಲೆಂಟ್ ಸುನೀಲ ನಾಪತ್ತೆಯಾಗಿದ್ದಾನೆ ಎಂದು ತೋರಿಸಲಾಗಿದೆ. ಬೆಂಗಳೂರಿನಲ್ಲಿ ರಕ್ತ ಹರಿಸಿದ್ದ ಸೈಲೆಂಟ್ ಸುನೀಲ ವಿವಿಧ ಅಪರಾಧ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದಾನೆ.
ಬೆಂಗಳೂರು (ನ.28): ರಾಜ್ಯದ ಸಿಸಿಬಿ ಪಟ್ಟಿಯಲ್ಲಿರುವ ಸೈಲೆಂಟ್ ಸುನೀಲನ ನಾಪತ್ತೆಯಾಗಿದ್ದಾನೆ ಎಂದು ತೋರಿಸಲಾಗಿದೆ. ಬೆಂಗಳೂರಿನಲ್ಲಿ ರಕ್ತ ಹರಿಸಿದ್ದ ಸೈಲೆಂಟ್ ಸುನೀಲ ವಿವಿಧ ಅಪರಾಧ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದಾನೆ. ಈ ಹಿಂದೆ ತಮಿಳುನಾಡಿಗೆ ಹೋಗಿ ತಲೆಮರಸಿಕೊಂಡಿದ್ದನು. ಈಗ ರಾಜಕಾರಣಕ್ಕೆ ಬರುವ ಉದ್ದೇಶದಿಂದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾನೆ. ಚಾಮರಾಜಪೇಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಕ್ತದಾನ ಶಿಬಿರ ಆಯೋಜನೆ ಮಾಡಿ ಬಿಜೆಪಿ ಹಿರಿಯ ನಾಯಕರೊಂದಿಗೆ ವೇದಿಕೆ ಹಂಚಿಕೊಂಡಿದ್ದಾನೆ. ಮುಂದಿನ ದಿನಗಳಲ್ಲಿ ಚಾಮರಾಜಪೇಟೆ ಕ್ಷೇತ್ರದಿಂದ ಜಮೀರ್ ಅಹಮದ್ ವಿರುದ್ಧ ಸ್ಪರ್ಧೆಗೆ ಯೋಜನೆ ರೂಪಿಸಿದ್ದಾನಾ ಎನ್ನುವುದನ್ನುಕಾದುನೋಡಬೇಕಿದೆ.