ಪೊಲೀಸರಿಗೆ ಸಿಗದ ರೌಡಿ ಶೀಟರ್‌ ಸಂಸದರ ಕಾರ್ಯಕ್ರಮದಲ್ಲಿ ಹಾಜರ್!

ಪೋಲೀಸರ ಕೈಯಿಂದ ತಪ್ಪಿಸಿಕೊಂಡು ಓಡಾಡುತ್ತಿರುವ ರೌಡಿ ಶೀಟರ್ ಸೈಲೆಂಟ್‌ ಸುನೀಲ್‌ ಸಂಸದ ಪಿ.ಸಿ. ಮೋಹನ್‌ ಹಾಗೂ ತೇಜಸ್ವಿಸೂರ್ಯ ಅವರೊಂದಿಗೆ ವೇದಿಕೆ ಕಾರ್ಯಕ್ರಮದಲ್ಲಿ ಹಾಜರಾಗಿದ್ದಾನೆ.

Share this Video
  • FB
  • Linkdin
  • Whatsapp

ಬೆಂಗಳೂರು (ನ.28): ಪೋಲೀಸರ ಕೈಯಿಂದ ತಪ್ಪಿಸಿಕೊಂಡು ಓಡಾಡುತ್ತಿರುವ ರೌಡಿ ಶೀಟರ್ ಸೈಲೆಂಟ್‌ ಸುನೀಲ್‌ ಸಂಸದ ಪಿ.ಸಿ. ಮೋಹನ್‌ ಹಾಗೂ ತೇಜಸ್ವಿಸೂರ್ಯ ಅವರೊಂದಿಗೆ ವೇದಿಕೆ ಕಾರ್ಯಕ್ರಮದಲ್ಲಿ ಹಾಜರಾಗಿದ್ದಾನೆ. ಸಿಸಿಬಿ ಲಿಸ್ಟ್‌ನಲ್ಲಿ ಇದ್ದು ತಲೆಮರೆಸಿಕೊಂಡು ಸಂಚಾರ ಮಾಡುತ್ತಿದ್ದಾರೆ. ಆದರೆ, ಈಗ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ನಡೆದ ಪುನೀತ್‌ ರಾಜ್ ಕುಮಾರ್‍‌ ಸ್ಮರಣೆ ಹಾಗೂ ರಕ್ತದಾನ ಶಿಬಿರ ಆಯೋಜನೆ ಮಾಡಿದ್ದರು. ಪೊಲೀಸರ ಎದುರೇ ರಾಜಾರೋಷವಾಗಿ ಓಡಾಡುತ್ತಿದ್ದಾರೆ. ಯಾರೊಬ್ಬರೂ ಅವರನ್ನು ಬಂಧಿಸಲು ಮುಂದಾಗಿಲ್ಲ. ರಾಜಕೀಯ ಒತ್ತಡ ಹೇರಿದ್ದಾರಾ ಎಂಬ ಅನುಮಾನ ಕಾಡುತ್ತಿದೆ. 

Related Video