Asianet Suvarna News Asianet Suvarna News
breaking news image

ರಕ್ತಸಿಕ್ತವಾಗಿ ನರಳಾಡ್ತಾ ಪ್ರಾಣಬಿಟ್ಟ ಗಿರೀಶ್, ಶಿವಮೊಗ್ಗದ ಘೋರ ಹತ್ಯೆಯ ಸಿಸಿಟಿವಿ ದೃಶ್ಯ

ಬಡ್ಡಿ ವ್ಯವಹಾರದ  ಗೊಂದಲ ಒಂದು ಜೀವವನ್ನೇ ಬಲಿ ಹಾಕಿತ್ತು/ ನಡು ರಸ್ತೆಯಲ್ಲೇ ರೌಡಿಶೀಟರ್ ಕೊಚ್ಚಿ ಪರಾರಿಯಾಗಿದ್ದ ತಂಡ/ ಶಿವಮೊಗ್ಗದಲ್ಲಿ ಆತಂಕ ಹೆಚ್ಚಿಸಿದ ಘಟನೆ/ ಕೊಲೆಯ ಘೋರ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಶಿವಮೊಗ್ಗ(ಫೆ. 07)  ನಟೋರಿಯಸ್ ರೌಡಿ ಹಂದಿ ಅಣ್ಣಿ ಸಹೋದರ ರೌಡಿ ಗಿರೀಶ್ ನನ್ನು ಶಿವಮೊಗ್ಗದಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಹತ್ಯೆಯ ಘೋರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮಚ್ಚಿನೇಟಿನಿಂದ ಗಾಯಗೊಂಡಿದ್ದ ಗಿರೀಶ್ ಮಧ್ಯ ರಸ್ತೆಯಲ್ಲೇ ಬಿದ್ದು ಹೊರಳಾಡುತ್ತಾರೆ. ಸಹಾಯಕ್ಕಾಗಿ ಅಂಗಲಾಚುತ್ತಾರೆ. ಈ ಘೋರ ದೃಶ್ಯದ ವಿಡಿಯೋ ಲಭ್ಯವಾಗಿದ್ದು ಎಂಥವರನ್ನು ಭಯ ಬೀಳಿಸುತ್ತದೆ.

ಕಾಂಡೋಮ್ ಬಳಸಲ್ಲ ಎಂದಿದ್ದಕ್ಕೆ ಸೆಕ್ಸ್ ನಿರಾಕರಿಸಿದ್ಲು; ಕೊಂದೆ ಬಿಟ್ಟ ಪಾಪಿ

ಶಿವಮೊಗ್ಗದ ಅನುಪಿನ ಕಟ್ಟೆ  ಬಡಾವಣೆಯ ಸಿದ್ದೇಶ್ವರ ಸರ್ಕಲ್ ಬಳಿ ಮಾರಾಕಾಸ್ತ್ರ ದಿಂದ ಅಜ್ರು ಗ್ಯಾಂಗ್ ಕೊಲೆ ಮಾಡಿ ಪರಾರಿಯಾಗಿದೆ ಎನ್ನಲಾಗಿದೆ. ಅನುಪಿನ ಕಟ್ಟೆಯ ಮಂದಾರ ಶಾಲೆಯ ಹಿಂಭಾಗ ತೂರ ಬಿಲ್ಲೆ ಗ್ಯಾಂಬ್ಲಿಂಗ್ ನಡೆಸಲಾಗಿತ್ತು. ಈ ಗ್ಯಾಂಬ್ಲಿಂಗ್ ಆಟದಲ್ಲಿ ಹಣ ಹಾಕಿದ್ದ ರೌಡಿ ದೊರೈ ಹಾಗೂ ಗ್ಯಾಂಬ್ಲರ್ ಅಜ್ರು ನಡುವೆ ಆಟದ ಸಂಬಂಧ ಮಾತಿನ ಚಕಮಕಿ ನಡೆದಿತ್ತು.

Video Top Stories