ಬೆಂಗಳೂರು [ಜ.23]: ಕಾಂಡೋಮ್ ಗಾಗಿ ನಡೆದ ಜಗಳ ತಾರಕಕ್ಕೆ ಏರಿದ್ದು, ಮಹಿಳೆಯ ಕೊಲೆಯಲ್ಲಿ ಅಂತ್ಯವಾಗಿದೆ. 

ಬೆಂಗಳೂರಿನ ಸುಬ್ರಮಣ್ಯ ನಗರದ ಮುಕುಂದ ಎಂಬಾತ ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದ ಮಂಜುಳಾ ಎಂಬ ಒಂಟಿ ಮಹಿಳೆಯನ್ನು ಕೊಲೆ ಮಾಡಿದ್ದು, ಇದೀಗ ಪೊಲೀಸರ ಅತಿಥಿಯಾಗಿದ್ದಾರೆ. 

ಮಂಜುಳಾ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಮೆಜೆಸ್ಟಿಕ್ ಸುತ್ತಮುತ್ತ ಸುತ್ತುತ್ತಿದ್ದಳು. ಈ ವೇಳೆ ಮುಕುಂದ ಮಂಜುಳಾ ಬಳಿ 1500 ರು. ವ್ಯವಹಾರ ಕುದುರಿಸಿದ್ದ. 

ಜನವರಿ 11 ರಂದು ಮಹಿಳೆಯನ್ನು ಬುಕ್ ಮಾಡಿಕೊಂಡು 500 ರು. ಅಡ್ವಾನ್ಸ್ ನೀಡಿದ್ದ. ಬಳಿಕ ಆಕೆಗೆ ಮನೆಗೆ ಹೋಗಿದ್ದ ಆತ 1000 ರು. ನೀಡಿದ್ದ. ಬಳಿಕ ಆಕೆ ಲೈಂಗಿಕ ಸಂಪರ್ಕ ಹೊಂದಲು ಕಾಂಡೋಮ್ ಹಾಕಿಕೊಳ್ಳುವಂತೆ ಮಂಜುಳಾ ಹೇಳಿದ್ದಾಳೆ. ಆದರೆ ಇದಕ್ಕೆ ಆತ ನಿರಾಕರಿಸಿದ್ದಾನೆ. 

ಮೊದಲ ಹೆಂಡ್ತಿ ನೋಡಲು ಎರಡನೇ ಹೆಂಡ್ತಿ ಜೊತೆ ಬಂದ :ಮಗನೊಂದಿಗೆ ವಿಷ ಕುಡಿದು ಪ್ರಾಣ ಬಿಟ್ಟ..

ಕಾಂಡೋಮ್ ಬಳಸದಿದ್ದಲ್ಲಿ ಲೈಂಗಿಕ ಸಂಪರ್ಕ ಸಾಧ್ಯವಿಲ್ಲ ಎಂದು ಮಹಿಳೆ ನಿರಾಕರಿಸಿದ್ದು, ಆದರೆ ಆತ ಒತ್ತಾಯ ಮಾಡಿದ್ದಾನೆ. ಅಲ್ಲದೇ ಹಣವನ್ನು ವಾಪಸ್ ಕೊಡುವಂತೆ ಹೇಳಿ ಜಗಳ ಮಾಡಿದ್ದಾನೆ. 

ಜಗಳ ತಾರಕಕ್ಕೆ ಹೋಗಿ ಮನೆಯಲ್ಲಿದ್ದ ಚಾಕು ತೆಗೆದುಕೊಂಡು ಮುಕುಂದ ಸಿಕ್ಕಸಿಕ್ಕಲ್ಲಿ ಇರಿದು ಮಂಜುಳಾ ಕೊಲೆ ಮಾಡಿದ್ದಾನೆ.  ಇದಾದ ನಂತರ ಮೊಬೈಲ್ ಚೈನ್ ಕಸಿದು ಪರಾರಿಯಾಗಿದ್ದಾನೆ. 

ಬಾಂಬಿಟ್ಟದ್ದು ಯಾಕೆ? ತನಿಖೆಯಲ್ಲಿ ಬಾಯ್ಬಿಟ್ಟ ಮಂಗಳೂರು ಬಾಂಬರ್‌...

ಈ ಘಟನೆ ಸಂಬಂಧ ದೂರು ದಾಖಲಿಸಿಕೊಂಡ ಸುಬ್ರಮಣ್ಯ ನಗರ ಮಹಿಳಾ ಠಾಣೆ ಪೊಲೀಸರು ತನಿಖೆ ನಡೆಸಿದ್ದು, ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದು, ಆರೋಪಿ ಮುಕುಂದನನ್ನು ಬಂಧಿಸಿದ್ದಾರೆ.

ಜನವರಿ 23ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ