
Central Jail Expose: ದುಡ್ಡು ಕೊಟ್ಟರೆ ಜೈಲಲ್ಲಿ ಐಷಾರಾಮಿ ವ್ಯವಸ್ಥೆ, ರೌಡಿಗಳ ದರ್ಬಾರ್ ನೋಡಿ!
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ (Central Jail) ಅಕ್ರಮ ಚಟುವಟಿಕೆ ಕುರಿತು ‘ಏಷ್ಯಾನೆಟ್ ಸುವರ್ಣ ನ್ಯೂಸ್’ನಿರಂತರವಾಗಿ ಸುದ್ದಿಪ್ರಸಾರ ಮಾಡಿತ್ತು. ಇಲ್ಲಿನ ಕೈದಿಗಳು ಜೈಲು ಸಿಬ್ಬಂದಿಗೆ ಗರಿಗರಿ ನೋಟುಗಳನ್ನು ಕೊಡುತ್ತಿರುವ ಕೆಲ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಬೆಂಗಳೂರು (ಫೆ. 01): ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ (Central Jail) ಅಕ್ರಮ ಚಟುವಟಿಕೆ ಕುರಿತು ‘ಏಷ್ಯಾನೆಟ್ ಸುವರ್ಣ ನ್ಯೂಸ್’ನಿರಂತರವಾಗಿ ಸುದ್ದಿಪ್ರಸಾರ ಮಾಡಿತ್ತು. ಇಲ್ಲಿನ ಕೈದಿಗಳು ಜೈಲು ಸಿಬ್ಬಂದಿಗೆ ಗರಿಗರಿ ನೋಟುಗಳನ್ನು ಕೊಡುತ್ತಿರುವ ಕೆಲ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
Central Jail Expose: ಜೈಲಿನಲ್ಲಿ ಶಂಕಿತ ಉಗ್ರನ ದರ್ಬಾರ್, ಹೇಗಿದೆ ನೋಡಿ ರಾಜಾತಿಥ್ಯ
ಕೈದಿಗಳು ನೀಡುವ ಹಣದಾಸೆಗೆ ಜೈಲು ಸಿಬ್ಬಂದಿ ಟೀವಿ, ಫ್ಯಾನ್, ಟೇಬಲ್ ಸೇರಿದಂತೆ ಹಲವು ಸವಲತ್ತುಗಳನ್ನು ನೀಡುತ್ತಿದ್ದಾರೆ. ಕೈದಿಗಳು ಮದ್ಯ, ಗಾಂಜಾ, ಗುಟ್ಕಾ, ಬೀಡಿ, ಸಿಗರೆಟು, ತಮ್ಮಿಷ್ಟದ ಆಹಾರ ಸೇವಿಸಿಕೊಂಡು ಐಷಾರಾಮಿಯಾಗಿ ಕಾಲ ಕಳೆಯುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಬಂಧನದಲ್ಲಿರುವ ಶಂಕಿತ ಉಗ್ರ ನಾಸೀರ್ ಹಾಗೂ ರೌಡಿಗಳು ಸೇರಿದಂತೆ ಹಲವರು ರಾಜಾತಿಥ್ಯ ಪಡೆದಿದ್ದಾರೆ. ಇವರಿಗಾಗಿಯೇ ಜೈಲನಲ್ಲಿಯೇ ತಯಾರಾಗುತ್ತಿತ್ತು. ಈ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ವರದಿ ಬಳಿ ಎಚ್ಚೆತ್ತ ಗೃಹ ಇಲಾಖೆ ತನಿಖೆಗೆ ಆದೇಶಿಸಿದೆ.