Central Jail Expose: ಜೈಲಿನಲ್ಲಿ ಶಂಕಿತ ಉಗ್ರನ ದರ್ಬಾರ್, ಹೇಗಿದೆ ನೋಡಿ ರಾಜಾತಿಥ್ಯ

 ಪರಪ್ಪನ ಅಗ್ರಹಾರ ಕೇಂದ್ರೀಯ ಕಾರಾಗೃಹದಲ್ಲಿ ಕೈದಿಗಳಿಗೆ ರಾಜಾತಿಥ್ಯ ಸಿಗುತ್ತಿರುವ ವಿಚಾರ ಮತ್ತೊಮ್ಮೆ ಬೆಳಕಿಗೆ ಬಂದಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ.

Share this Video
  • FB
  • Linkdin
  • Whatsapp

ಬೆಂಗಳೂರು (ಜ. 29): ಪರಪ್ಪನ ಅಗ್ರಹಾರ (Parappana Agrahara) ಕೇಂದ್ರೀಯ ಕಾರಾಗೃಹದಲ್ಲಿ ಕೈದಿಗಳಿಗೆ ರಾಜಾತಿಥ್ಯ ಸಿಗುತ್ತಿರುವ ವಿಚಾರ ಮತ್ತೊಮ್ಮೆ ಬೆಳಕಿಗೆ ಬಂದಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ.

Central Jail Expose: ಶಂಕಿತ ಉಗ್ರನಿಗೆ ಜೈಲಲ್ಲಿ ರಾಜಾತಿಥ್ಯ, ಜೈಲಲ್ಲೇ ತಯಾರಾಗುತ್ತೆ ಚಿಕನ್, ಕಬಾಬ್..!

ಇಲ್ಲಿನ ಕೈದಿಗಳು ಜೈಲು ಸಿಬ್ಬಂದಿಗೆ ಗರಿಗರಿ ನೋಟುಗಳನ್ನು ಕೊಡುತ್ತಿರುವ ಕೆಲ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ. ಜೈಲು ಸಿಬ್ಬಂದಿ ಕೈದಿಗಳಿಂದ ಹಣ ಪಡೆಯುವಾಗ ಕೈದಿಗಳ ಯೋಗಕ್ಷೇಮ ವಿಚಾರಿಸುವುದು, ಆತ್ಮೀಯವಾಗಿ ಮಾತನಾಡುವುದು, ಕೈದಿಗಳು ಎರಡು ಸಾವಿರ ರು. ಮುಖಬೆಲೆಯ ನೋಟು ನೀಡಿದಾಗ ಚಿಲ್ಲರೆ ಕೊಡುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಬೆಂಗಳೂರು ಸರಣಿ ಬಾಂಬ್ ಸ್ಫೋಟದ ಶಂಕಿತ ಉಗ್ರ ನಾಸಿರ್‌ಗೆ ಸೆಲ್‌ನಲ್ಲೇ ಬಯಸಿದ ಖಾದ್ಯಗಳು ತಯಾರಾಗುತ್ತದೆ. ಮನೆಯಂತೆ ಬೇಕಾದಂತೆ ಇಲ್ಲಿಯೂ ಇರುವ ವ್ಯವಸ್ಥೆ ಮಾಡಿಕೊಡಲಾಗಿದೆ. ಇದರಲ್ಲಿ ಪೊಲೀಸರು ಶಾಮಿಲಾಗಿರುವುದು ನಾಚಿಕೆಗೇಡಿನ ವಿಚಾರ. ಇವೆಲ್ಲದರ ಬಗ್ಗೆ ಕವರ್ ಸ್ಟೋರಿ ಕಾರ್ಯಾಚರಣೆ ನಡೆಸಿದೆ. 

Related Video