Asianet Suvarna News Asianet Suvarna News

39 ಗಾಯ, ಕಾಟೇರನ ರಕ್ಕಸ ಕ್ರೌರ್ಯ: 6 ಗಂಟೆಗಳ ನರಕ ಯಾತನೆ: FSL ರಿಪೋರ್ಟ್ ತೆರೆದಿಟ್ಟ ಸತ್ಯವೇನು..?

 ರೇಣುಕಾಸ್ವಾಮಿ ಕೊಲೆಯಾದಾಗ, ಪಟ್ಟಣಗೆರೆ ಶೆ್ಡ್ನಲ್ಲಿ ಏನೇನಾಯ್ತು? ದರ್ಶನ್‌ನ ಥಾ ದರ್ಶನ್ ಎ2 ಆರೋಪಿಯಾದ್ರೆ, ಪವಿತ್ರಾ ಗೌಡ ಎ1 ಆರೋಪಿಯಾಗಿ ಉಳಿದುಕೊಂಡಿದ್ದು ಹೇಗೆ? ರೇಣುಕಾಸ್ವಾಮಿ ಮೇಲೆ ನಡೆದ ಕ್ರೌರ್ಯ ಎಂತಹದ್ದು ಇಲ್ಲಿದೆ ಎಫ್‌ಎಸ್‌ಎಲ್ ವರದಿ ರಿಪೋರ್ಟ್

First Published Sep 6, 2024, 10:31 AM IST | Last Updated Sep 6, 2024, 10:31 AM IST

ರೇಣುಕಾಸ್ವಾಮಿ ಕೊಲೆಯಾಗಿ 3 ತಿಂಗಳು ಮುಗೀತಾ ಬಂದಿದೆ.. ಅವರ ಕುಟುಂಬ ಕೊಲೆಗಡುಕರಿಗೆ ಶಿಕ್ಷೆಯಾಗಲಿದೆ ಅಂತ ನಂಬಿಕೊಂಡಿದೆ.. ಇನ್ನೊಂದು ಕಡೆ, ಕೊಲೆಯ ಆರೋಪ ಹೊತ್ತಿರೋ, ಡೆವಿಲ್ ಹೀರೋ ದರ್ಶನ್ ಹಾಗೂ ಅವನ ಪಟಾಲಂ ಕಂಬಿ ಹಿಂದೆ ನಿಂತಾಗಿದೆ.. ಅವರ ವಿರುದ್ಧ ಚಾರ್ಜ್ಶೀಟ್ ಕೂಡ ಸಲ್ಲಿಸಿದ್ದಾಗಿದೆ..  ಆದ್ರೆ, ಆ ಪಟಾಲಂನ ಕ್ರೌರ್ಯ ಮಾತ್ರ ಎಂಥವರನ್ನೂ ಬೆಚ್ಚಿಬೀಳಿಸಿಬಿಡುತ್ತೆ. ಮಧ್ಯಾಹ್ನ ಸುಮಾರು ಒಂದು ಗಂಟೆ ಹೊತ್ತಿಗೆ ಪಟ್ಟಣಗೆರೆಯ ಶೆಡ್ ಸೇರಿದೋನು, ಏನೇನೆಲ್ಲಾ ನರಕ ಯಾತನೆ ಅನುಭವಿಸಿದ್ದ ಅನ್ನೋ ಸುದ್ದಿಗಳು ಈಚೆ ಬರ್ತಾ ಇವೆ.. ಅದನ್ನ ಕೇಳಿದ್ರೆನೇ, ನಿಂತಭೂಮಿಯೇ ಕಂಪಿಸಿದಂತಾಗುತ್ತೆ.. ಅಂತಿಮ ಕ್ಷಣದಲ್ಲಿ ರೇಣುಕಾಸ್ವಾಮಿ ಅದೆಂಥಾ ನರಕ ನೋಡಿದ್ದ ಅನ್ನೋದಕ್ಕೆ ಅವನ ರಕ್ತವೇ ಸಾಕ್ಷಿ ಹೇಳ್ತಾ ಇದೆ. ಈ ಬಗ್ಗೆ ಒಂದು ಡಿಟೇಲ್ ಸ್ಟೋರಿ