
ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್ಡೆತ್?
ಪೊಲೀಸರು ಯಾವುದೋ ಪಿಟಿ ಕೇಸ್ ಮೇಲೆ ಆತನನ್ನ ಎತ್ತಾಕೊಂಡು ಹೋಗಿದ್ರು. ಆತನ ಹೆತ್ತವರ ಕೋರಿಕೆ ಮೇರೆಗೆ ಆತನನ್ನ ರಿಹ್ಯಾಬಿಲಿಟೇಷನ್ ಸೆಂಟರ್ಗೆ ಸೇರಿಸಿದ್ರು. ಆದ್ರೆ ಆತ ಹೋಗಿ 10 ದಿನಗಳಾಗಿತ್ತು ಅಷ್ಟೇ.
ಅವನಿಗಿನ್ನು 22 ವರ್ಷ.. ಅಗಲೇ ಒಮ್ಮೆ ಜೈಲಿಗೆ ಹೋಗಿ ಬಂದಿದ್ದ.. ಕುಡಿಯೋದು ಏರಿಯಾದಲ್ಲೆಲ್ಲಾ ಗಲಾಟೆ ಮಾಡೋದು ಇದೇ ಅವನ ಕಾಯಕ. ಇನ್ನೂ ಈ ವಯಸಿಗಾಗ್ಲೇ ಆತನಿಗೆ 2 ವರ್ಷ ಮಗು ಇತ್ತು. ಪ್ರೀತಿಸಿ ಮದುವೆಯಾದವಳನ್ನೂ ಆತ ಸರಿಯಾಗಿ ಬಾಳಿಸಲಿಲ್ಲ. ಗಂಡನ ಸಹವಾಸ ಬೇಡ ಅಂತ 8 ತಿಂಗಳ ಹಿಂದೆಯೇ ಬಿಟ್ಟು ಹೋಗಿದ್ಲು.. ಪರಿಸ್ಥಿತಿ ಹೀಗಿರುವಾಗ್ಲೇ ಆವತ್ತೊಂದು ದಿನ ಪೊಲೀಸರು ಯಾವುದೋ ಪಿಟಿ ಕೇಸ್ ಮೇಲೆ ಆತನನ್ನ ಎತ್ತಾಕೊಂಡು ಹೋಗಿದ್ರು. ಆತನ ಹೆತ್ತವರ ಕೋರಿಕೆ ಮೇರೆಗೆ ಆತನನ್ನ ರಿಹ್ಯಾಬಿಲಿಟೇಷನ್ ಸೆಂಟರ್ಗೆ ಸೇರಿಸಿದ್ರು. ಆದ್ರೆ ಆತ ಹೋಗಿ 10 ದಿನಗಳಾಗಿತ್ತು ಅಷ್ಟೇ. ಆವನು ಸತ್ತು ಹೋದ ಅನ್ನೋ ಸುದ್ದಿ ಹೆತ್ತವರಿಗೆ ಬಂದಿತ್ತು. ಹಾಗಾದ್ರೆ ಅವನಿಗೆ ಏನಾಯ್ತು..?
ಪುನಶ್ಚೇತನ ಶಿಬಿರದಲ್ಲಿ ಅವನಿಗೆ ಏನ್ ಮಾಡಿದ್ರು? ಹೆತ್ತವರು ಪೊಲೀಸರ ಕಡೆಗೆ ಬೊಟ್ಟು ಮಾಡ್ತಿರೋದ್ಯಾಕೆ? ಒಂದು ಕಸ್ಟೋಡಿಯಲ್ ಡೆತ್ ಹಿಂದಿನ ಕಥೆಯೇ ಇವತ್ತಿನ ಎಫ್ಐಆರ್. ಸತ್ತವನು ಕಡುಕನೋ.. ಸುಳ್ಳನೋ.. ಏನೇ ಆಗಲಿ.. ಆದ್ರೆ ಒಂದು ಜೀವ ಹೋಗಿದೆ.. ಅದಕ್ಕೆ ಕಾರಣ ಪೊಲೀಸರು ಮತ್ತು ರಿಹ್ಯಾಬಿಲಿಟೇಷನ್ ಸೆಂಟರ್ ಅನ್ನೋ ಆರೋಪ ಕೇಳಿ ಬಂದಿದೆ. ಸದ್ಯ ತನಿಖೆ ಆರಂಭವಾಗಿದೆ. ನೊಡೋಣ ಈ ಕೇಸ್ಗೆ ಎಲ್ಲಿಗೆ ಹೋಗಿ ನಿಲ್ಲುತ್ತೆ ಅಂತ. ಅವ್ರೆಲ್ಲ ಒಂದೇ ಬಡಾವಣೆಯ ಯುವಕರು. ಜೊತೆಗೆ ಇದ್ದವರು..ಅಣ್ಣತಮ್ಮರಂತೆ ಬೆಳೆದವರು.. ಆದ್ರೆ, ಇತ್ತೀಚೆಗೆ ಒಂದು ಸಣ್ಣ ಕಾರಣಕ್ಕೆ ಆ ಎರಡು ಗುಂಪಿನ ಮಧ್ಯೆ ವೈಮನಸ್ಸು ಮೂಡಿತ್ತು. ಇದೇ ಕಾರಣಕ್ಕೆ ಆಗ್ಗಾಗೆ ಇಬ್ಬರ ನಡುವೆ ಸಣ್ಣಪುಟ್ಟ ಫೈಟ್ಗಳು ನಡೆಯುತ್ತಲೇ ಇತ್ತು.
ಆದ್ರೆ ಆವತ್ತೊಂದು ದಿನ ಹಳೆಯ ದ್ವೇಷ ಇಡ್ಕೊಂಡಿದ್ದ ಒಂದು ಗುಂಪು ಬಾರ್ ಎದುರು ನಿಂತಿದ್ದ ಯುವಕನ ಮೇಲೆ ಡೆಡ್ಲಿ ಅಟ್ಯಾಕ್ ಮಾಡಿಬಿಟ್ಟಿದೆ. ತಲೆ ಮೇಲೆ ಒಂದರ ನಂತರ ಮತ್ತೊಂದರಂತೆ ಬಿಯರ್ ಬಾಟಲ್ನಿಂದ ದಾಳಿ ಮಾಡಿದೆ. ಸಾಲದ್ದಕ್ಕೆ ಕಿಡಿಗೇಡಿಯೊಬ್ಬ ತಲ್ವಾರ್ನಿಂದ ಇರಿದುಬಿಟ್ಟಿದ್ದಾನೆ. ಅದೃಶಷ್ವಷಾತ್ ಹಲ್ಲೆಗಳಗಾದವನು ಬದುಕಿಬಿಟ್ಟಿದ್ದಾನೆ. ವಯಸಲ್ಲದ ವಯಸಲ್ಲಿ, ಹವಾ ಮೇಂಟೇನ್ ಮಾಡಬೇಕು ಅಂತಲೋ ಅಥವಾ ದುಡ್ಡು ಮಾಡಬೆಕು ಅಂತಲೋ ಫೀಲ್ಡ್ಗೆ ಇಳಿದುಬಿಡ್ತಾರೆ. ಆದ್ರೆ ನಂತರ ಒಂದೊ ಹೆಣವಾಗ್ತಾರೆ. ಇಲ್ಲಾ ಜೈಲು ಸೇರುತ್ತಾರೆ. ಸಣ್ಣವಯಸಿನಲ್ಲಿ ಈ ಪಾಪದ ಲೋಕದ ಕಡೆಗೆ ಆಕರ್ಷಣೆಗೊಳ್ಳೋ ಯುವಕರಿಗೆ ಇವತ್ತಿನ ಎರಡೂ ಕಥೆಗಳು ಪಾಠವಾಗಲಿ.