Asianet Suvarna News Asianet Suvarna News

ಪೊಲೀಸರಿಗೆ ಮಾಹಿತಿದಾರನಂತಿದ್ದುಕೊಂಡು ಡ್ರಗ್ಸ್ ಪೆಡ್ಲರ್ ಆಡ್ತಿದ್ದ ಐನಾತಿ ಆಟವಿದು.!

Sep 4, 2021, 2:39 PM IST

ಬೆಂಗಳೂರು (ಸೆ. 04): ಡ್ರಗ್ ಪೆಡ್ಲರ್ ರತನ್ ಲಾಲ್ ಬಂಧನದ ಬಳಿಕ ಮತ್ತೊಂದು ಡ್ರಗ್ ಜಾಲ ಪತ್ತೆಯಾಗಿದೆ. ಕಳೆದ 8 ವರ್ಷಗಳಿಂದ ರತನ್ ಲಾಲ್ ಡ್ರಗ್ ಸೇವಿಸುತ್ತಿದ್ದ. ಡ್ರಗ್ ಪೂರೈಕೆಯಿಂದಲೇ ಹಣವನ್ನು ಸಂಪಾದಿಸುತ್ತಿದ್ದ. ಪೊಲೀಸ್ ಮಾಹಿತಿದಾರರನಂತೆ ನಟಿಸುತ್ತಾ, ಡ್ರಗ್ಸ್ ದಂಧೆ ನಡೆಸುತ್ತಿದ್ದ. ಈತನ ಜೊತೆ ಕೆಲ ಪೊಲೀಸರು ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ. ರತನ್ ಲಾಲ್ ವಿಶಾಖಪಟ್ಟಣದಲ್ಲಿ ಗಾಂಜಾ, ಆಫೀಮು ಖರೀದಿಸುತ್ತಿದ್ದ. ಜೊತೆಗೆ ವೈಜಾಗ್ - ಒರಿಸ್ಸಾ ಗಡಿಭಾಗದ ನಕ್ಸಲ್ ಜೊತೆ ನಂಟಿರುವ ಗುಮಾನಿಯೂ ಇದೆ. 

ಮೈಸೂರಲ್ಲಿ ಅತ್ಯಾಚಾರ ಯತ್ನ ಆರೋಪ: ಆರೋಪಿ ಅರೆಸ್ಟ್ ಬಳಿಕ ಯೂ ಟರ್ನ್ ಹೊಡೆದ ಯುವತಿ.!