Asianet Suvarna News Asianet Suvarna News

ಶೂಟ್ ಮಾಡಿಕೊಂಡು ವಿದ್ಯಾರ್ಥಿ ಆತ್ಮಹತ್ಯೆ; ಮಾನಸಿಕ ಒತ್ತಡ ಶಂಕೆ.?

Sep 17, 2021, 11:18 AM IST

ಬೆಂಗಳೂರು (ಸೆ. 17): ಪಿಯುಸಿ ಓದುತ್ತಿರುವ ವಿದ್ಯಾರ್ಥಿಯೊಬ್ಬ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ಧಾನೆ. ಮಾನಸಿಕ ಒತ್ತಡದಿಂದ ಬಳಲುತ್ತಿರುವ ಶಂಕೆ ವ್ಯಕ್ತವಾಗಿದೆ. ಮಾನಸಿಕ ಒತ್ತಡ ಹೆಚ್ಚಾದಾಗ ಎದ್ದು ವಾಕ್ ಹೋಗುತ್ತಿದ್ದ.

ಇಂದು ಬೆಳಿಗ್ಗೆ 4 ಗಂಟೆಗೆ ಮನೆಯಿಂದ ತೆರಳಿದ್ದ ಯುವಕ ವಾಪಸ್ಸಾಗಲಿಲ್ಲ. ಪೋಷಕರು ನಿರಂತರವಾಗಿ ಕರೆ ಮಾಡುತ್ತಲೇ ಇದ್ದರು. ಕೊನೆಗೆ ಪೊಲೀಸರು ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಉತ್ತರಾಖಂಡ್‌ನ ನಿವೃತ್ತ ಆರ್ಮಿ ಆಫೀಸರ್ ಪುತ್ರ ಈ ರಾಹುಲ್. ಸದಾಶಿವನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 

Video Top Stories