Asianet Suvarna News Asianet Suvarna News

ಪಿಎಸ್‌ಐ ಹಗರಣ: ಪ್ರತಿಭಟನೆಯ ಪ್ರಮುಖ ಆಯೋಜಕನೇ ಆರೋಪಿ ನಂ.1 ,ಬಯಲಾಯ್ತು ಬ್ಲೂಟೂತ್ ಅಕ್ರಮ..!

ಬೆಂಗಳೂರು (ಮೇ. 07): ಪಿಎಸ್‌ಐ ನೇಮಕಾತಿಯಲ್ಲಿ (PSI Recruitment) ನಡೆದ ಅಕ್ರಮ ರಾಜ್ಯಾದ್ಯಂತ ಭಾರೀ ಸದ್ದು ಮಾಡುತ್ತಿದೆ.  ದಿನೇ ದಿನೇ ಹೊಸ ಹೊಸ ವಿಚಾರಗಳು ಹೊರಬರುತ್ತಿವೆ. ಆರೋಪಿಗಳ ಬಂಧನವಾಗುತ್ತಿದೆ. ಸಿಐಡಿ (CID) ತನಿಖೆಯೂ ಮುಂದುವರೆದಿದೆ. ಇನ್ನೊಂದು ಕಡೆ ಇಡೀ ಪರೀಕ್ಷಾ ಪ್ರಕ್ರಿಯೆಯನ್ನು ರದ್ದುಪಡಿಸಿ ಸರ್ಕಾರವು ಅಧಿಕೃತವಾಗಿ ಆದೇಶಿಸಿದೆ. 

ಬೆಂಗಳೂರು (ಮೇ. 07): ಪಿಎಸ್‌ಐ ನೇಮಕಾತಿಯಲ್ಲಿ (PSI Recruitment) ನಡೆದ ಅಕ್ರಮ ರಾಜ್ಯಾದ್ಯಂತ ಭಾರೀ ಸದ್ದು ಮಾಡುತ್ತಿದೆ.  ದಿನೇ ದಿನೇ ಹೊಸ ಹೊಸ ವಿಚಾರಗಳು ಹೊರಬರುತ್ತಿವೆ. ಆರೋಪಿಗಳ ಬಂಧನವಾಗುತ್ತಿದೆ. ಸಿಐಡಿ (CID) ತನಿಖೆಯೂ ಮುಂದುವರೆದಿದೆ. ಇನ್ನೊಂದು ಕಡೆ ಇಡೀ ಪರೀಕ್ಷಾ ಪ್ರಕ್ರಿಯೆಯನ್ನು ರದ್ದುಪಡಿಸಿ ಸರ್ಕಾರವು ಅಧಿಕೃತವಾಗಿ ಆದೇಶಿಸಿದೆ. ಸರ್ಕಾರದ ಈ ನಿರ್ಧಾರವನ್ನು ಖಂಡಿಸಿ, ಅಭ್ಯರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಮಜಾ ಏನಂದ್ರೆ, ಪ್ರತಿಭಟನೆಯ ಪ್ರಮುಖ ಆಯೋಜಕನೇ ಅಕ್ರಮ ಪ್ರಕರಣದ ಆರೋಪಿ ನಂ.1 ಆಗಿದ್ದರೆ, ಇದೇ ಪ್ರತಿಭಟನೆಯಲ್ಲಿ ಸರ್ಕಾರವನ್ನು ಕಟುವಾಗಿ ಟೀಕಿಸಿದ್ದ ಮಹಿಳಾ ಅಭ್ಯರ್ಥಿಯೇ ಆರೋಪಿ ನಂ.17 ಆಗಿದ್ದಾಳೆ.

News Hour ರಾಜ್ಯದ ಇತರ ಜಿಲ್ಲೆಗಳಲ್ಲೂ ಅಕ್ರಮದ ಜಾಡು! ಪಿಎಸ್‌ಐ ನೇಮಕಾತಿ ಹಗರಣದ ಕಿಂಗ್‌ಪಿನ್ ಯಾರು?

ನೇಮಕಾತಿ ಹಗರಣ ಸಂಬಂಧ ಹೈಗ್ರೌಂಡ್ಸ್ ಠಾಣೆಯಲ್ಲಿ ದಾಖಲಾದ ಎಫ್‌ಐಆರ್‌ನಲ್ಲಿ ಪ್ರತಿಭಟನೆಯ ಆಯೋಜಕನಾಗಿದ್ದ ಜಾಗೃತ್‌ ಹಾಗೂ ಮಹಿಳಾ ಕೋಟಾದಲ್ಲಿ 1ನೇ ರ್ಯಾಂಕ್ ಪಡೆದ ಅಭ್ಯರ್ಥಿ ರಚನಾ ಹಣಮಂತ್‌ ಹೆಸರು ಉಲ್ಲೇಖವಾಗಿದ್ದು, ಜಾಗೃತ್‌ನನ್ನು ಸಿಐಡಿ ಬಂಧಿಸಿದೆ. ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ ಆರೋಪಿಗಳಾದ ಜಾಗೃತ್‌ ಮತ್ತು ರಚನಾ ಹನುಮಂತ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ಸುವರ್ಣ ನ್ಯೂಸ್ ಕವರ್ ಸ್ಟೋರಿ ತಂಡ ಕಾರ್ಯಾಚರಣೆ ನಡೆಸಿದಾಗ, ಕೆಲವು ಸ್ಫೋಟಕ ವಿಚಾರಗಳು ಹೊರ ಬಂದಿವೆ.