ADGP ಅಮೃತ್ ಪಾಲ್- DYSP ಶಾಂತಕುಮಾರ್ ಮನೆಯ ಮೇಲೆ ಇಡಿ ದಾಳಿ
Karnataka PSI Recruitment Scam: ಪಿಎಸ್‌ಐ ಹಗರಣದ ಆರೋಪಿಗಳಿಗೆ ಜಾರಿ ನಿರ್ದೇಶನಾಲಯ ಶಾಕ್ ನೀಡಿದೆ
ಬೆಂಗಳೂರು (ನ. 10): ಪಿಎಸ್‌ಐ ಹಗರಣದ (PSI Recruitment Scam) ಆರೋಪಿಗಳಿಗೆ ಜಾರಿ ನಿರ್ದೇಶನಾಲಯ ಶಾಕ್ ನೀಡಿದೆ. ಎಡಿಜಿಪಿ ಅಮೃತ್ ಪಾಲ್ (Amrit Paul) ಹಾಗೂ ಡಿವೈಎಸ್ಪಿ ಶಾಂತಕುಮಾರ್ (DYSP Shantakumar) ಮನೆಯ ಮೇಲೆ ಇಡಿ ದಾಳಿ ನಡೆಸಿದೆ. ಸಹಕಾರ್ ನಗರದ ಅಮೃತ್ ಪಾಲ್ ನಿವಾಸ ಹಾಗೂ ಆಡುಗೋಡಿಯ ಶಾಂತಕುಮಾರ್ ನಿವಾಸದಲ್ಲಿ ಇ.ಡಿ ಅಧಿಕಾರಿಗಳು ತೀವ್ರ ಶೋಧ ನಡೆಸಿದ್ದಾರೆ. ಅಕ್ರಮ ಹಣ ವರ್ಗಾವಣೆ ಬಗ್ಗೆ ಜಾರಿ ನಿರ್ದೇನಾಲಯನಕ್ಕೆ ಸಿಐಡಿ (CID) ದೂರು ನೀಡಿತ್ತು. ಈ ಬೆನ್ನಲ್ಲೇ ಮನಿ ಲಾಂಡ್ರಿಂಗ್ ಕಾಯ್ದೆಯಡಿ (Money Laundering Case) ಇ.ಡಿ ಕೇಸ್ ದಾಖಲಿಸಿಕೊಂಡಿತ್ತು. ಈ ಬೆನ್ನಲ್ಲೇ ಆರೋಪಿ ಅಧಿಕಾರಿಗಳ ಮನೆಗಳ ಮೇಲೆ ಇ.ಡಿ ದಾಳಿ ನಡೆಸಿದೆ. ಈ ಕುರಿತ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ
ಪಿಎಸ್‌ಐ ಅಷ್ಟೇ ಅಲ್ಲ ಎಫ್‌ಡಿಎ, ಜೆಇ, ಕಾನ್ಸಟೇಬಲ್ ನೇಮಕಾತಿಯಲ್ಲೂ ಅಕ್ರಮ..!