ಕಾನೂನಿನ ಕುಣಿಕೆಯಲ್ಲಿ ಬಂಧಿಯಾಗ್ತಾರಾ ಅಪ್ಪ-ಮಗ!? ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ದಾಖಲಿಸಿದ ಸಂತ್ರಸ್ತೆ..!

"ಡಿಕೆ ಸಹೋದರರನ್ನು 420 ಬ್ರದರ್ಸ್" ಎಂದದ್ದೇಕೆ ಕುಮಾರಸ್ವಾಮಿ..?
"ನಿಮ್ಮ ಕುಟುಂಬವನ್ನು ವಿಶ್ವವೇ ಹೊಗಳುತ್ತಿದೆ" ಎಂದ ಡಿಕೆ ಬ್ರದರು..!
ರೇವಣ್ಣಗೆ ಬಂಧನದ ಭಯ.. ಪ್ರಜ್ವಲ್‌ಗೆ ಲುಕ್‌ಔಟ್ ನೋಟಿಸ್ ಜಾರಿ..!
 

Share this Video
  • FB
  • Linkdin
  • Whatsapp

ಅಶ್ಲೀಲ ವೀಡಿಯೊ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣಗೆ ಲುಕ್ ಔಟ್ ನೋಟೀಸ್ ಜಾರಿಯಾಗಿದೆ. ಸಂಸದ ಪ್ರಜ್ವಲ್ ರೇವಣ್ಣನದ್ದು(Prajwal Revanna) ಎನ್ನಲಾಗ್ತಿರೋ ಅಶ್ಲೀಲ ವಿಡಿಯೋ(Prajwal Revanna in obscene video) ಬಾಂಬ್‌ನಿಂದ ಸಿಡಿದ ಕಿಡಿಯಲ್ಲಿ ರಾಜಕೀಯ ಜ್ವಾಲೆ ಧಗಧಗಿಸ್ತಾ ಇದೆ. 2,976 ಅಶ್ಲೀಲ ವೀಡಿಯೊಗಳು. ಆ ವೀಡಿಯೊಗಳ ಸೂತ್ರಧಾರ, ಪಾತ್ರಧಾರ ಹಾಸನದ(Hassan) ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅನ್ನೋದು ಆರೋಪ. ವಿಡಿಯೋ ಬಾಂಬ್ ಸ್ಫೋಟಗೊಳ್ತಾ ಇದ್ದಂತೆ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹಾರಿದ್ರೆ, ಇತ್ತ ವಿಡಿಯೋ ಲೀಕ್ ಮಾಡಿದ್ದು ಯಾರು ಅನ್ನೋ ಪ್ರಶ್ನೆ ಎದ್ದು ಕೂತಿದೆ. ಇದೇ ಪ್ರಶ್ನೆ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ(HD Kumaraswamy ) ಮತ್ತು ಡಿಕೆ ಸಹೋದರರ ಮಧ್ಯೆ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿ ಬಿಟ್ಟಿದೆ. ಸಂಸದ ಪ್ರಜ್ವಲ್ ರೇವಣ್ಣನ ಮಾಜಿ ಕಾರು ಚಾಲಕ ಕಾರ್ತಿಕ್ ಮೇಲೆ ನೆಟ್ಟಿರೋ ಕುತೂಹಲದ ಕಣ್ಣುಗಳು ಒಂದೆರಡಲ್ಲ. ಯಾಕಂದ್ರೆ ಈ ಅಶ್ಲೀಲ ವಿಡಿಯೋಗಳು ಮೊದಲು ಸಿಕ್ಕಿದ್ದೇ ಡ್ರೈವರ್ ಕಾರ್ತಿಕ್‌ಗೆ. ಅದನ್ನು ತಾನು ಹೊಳೆನರಸೀಪುರದ ವಕೀಲ, ಬಿಜೆಪಿ ಮುಖಂಡ ದೇವರಾಜೇಗೌಡರಿಗೆ ಕೊಟ್ಟಿದ್ದೆ ಅಂತ ವಿಡಿಯೋ ಮೂಲಕ ಕಾರ್ತಿಕ್ ಹೇಳಿಕೆ ಕೊಟ್ಟಿದ್ದ. ಇದಾದ ನಂತ್ರ ಕಾರ್ತಿಕ್ ಎಲ್ಲಿದ್ದಾನೆ ಅನ್ನೋ ಪತ್ತೆಯೇ ಇಲ್ಲ. ವಿಚಾರಣೆಗೆ ಹಾಜರಾಗುವಂತೆ SIT ನೋಟಿಸ್ ಜಾರಿಯಾದ್ರೂ, ಕಾರ್ತಿಕ್ ಸುಳಿವು ಪತ್ತೆಯಾಗಿಲ್ಲ. ಆದ್ರೆ ಕಾರ್ತಿಕ್ ಮಲೇಷ್ಯಾದಲ್ಲಿದ್ದಾನೆ ಅಂತ ಹೊಸ ಬಾಂಬ್ ಸಿಡಿಸಿದ್ದಾರೆ ಪ್ರಜ್ವಲ್ ರೇವಣ್ಣನ ಚಿಕ್ಕಪ್ಪ, ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ. ಇದು ಪ್ರಜ್ವಲ್ ರೇವಣ್ಣನ ಕಾಮಕಾಂಡದ ವಿಚಾರದಲ್ಲಿ ಕುಮಾರಸ್ವಾಮಿ ಮತ್ತು ಡಿಕೆ ಬ್ರದರ್ಸ್(DK Shivakumar) ಮಧ್ಯೆ ಶುರುವಾಗಿರೋ ರಾಜಕೀಯ ಜಂಗೀಕುಸ್ತಿಯ ಸ್ಯಾಂಪಲ್ ಅಷ್ಟೇ. ಪ್ರಜ್ವಲ್ ವಿಡಿಯೋ ಬಿಡುಗಡೆಯಾಗಿರೋದ್ರ ಹಿಂದೆ ಮಹಾನಾಯಕನ ಕೈವಾಡವಿದೆ ಅಂತ ಕುಮಾರಸ್ವಾಮಿ ಆರೋಪಿಸಿರೋದು ಡಿಕೆ ಸಹೋದರರನ್ನು ಕೆರಳಿಸಿ ಬಿಟ್ಟಿದೆ. ಕೆರಳಿದ ಸಹೋದರರಿಬ್ಬರೂ ದಳಪತಿ ಮೇಲೆ ಮುಗಿ ಬಿದ್ದಿದ್ದಾರೆ.

ಇದನ್ನೂ ವೀಕ್ಷಿಸಿ: Prajwal Revanna : ದುಬೈಗೆ ಹಾರಿದ್ರಾ ಪ್ರಜ್ವಲ್‌ ರೇವಣ್ಣ? ಬೆಂಗಳೂರಿಗೆ ಬರೋದು ಡೌಟಾ..?

Related Video