ನಟಿಯರ ಬಳಿಕ ರಾಜಕಾರಣಿಗಳ ಸರದಿ, ಇವರೆಲ್ಲರ ಕೊರಳಿಗೆ ಡ್ರಗ್ ಕೇಸ್ ಉರುಳು?
ಸ್ಯಾಂಡಲ್‌ವುಡ್ ಡ್ರಗ್ ಮಾಫಿಯಾ ಹೊರ ಬಂದಿದ್ದೇ ತಡ, ರಾಜಕಾರಣಿಗಳಿಗೂ ಇದರ ಬಿಸಿ ಮುಟ್ಟಿದೆ. ರಾಜಕಾರಣಿಗಳು ಕೂಡಾ ಹೈ ಅಲರ್ಟ್ ಆಗಿದ್ದಾರೆ. ಅವರ ಮಕ್ಕಳ ಮೇಲೆ ನಿಗಾ ಇಡುತ್ತಿದ್ದಾರೆ. ಹೊರಗಡೆ ಹೋಗುವ, ಬರುವ ಬಗ್ಗೆ ನಿಗಾ ವಹಿಸುತ್ತಿದ್ದಾರೆ. ಮೊಬೈಲ್ ನಂಬರ್ ಬದಲಾಯಿಸಿದ್ದಾರೆ.
ಬೆಂಗಳೂರು (ಸೆ. 06): ಸ್ಯಾಂಡಲ್‌ವುಡ್ ಡ್ರಗ್ ಮಾಫಿಯಾ ಹೊರ ಬಂದಿದ್ದೇ ತಡ, ರಾಜಕಾರಣಿಗಳಿಗೂ ಇದರ ಬಿಸಿ ಮುಟ್ಟಿದೆ. ರಾಜಕಾರಣಿಗಳು ಕೂಡಾ ಹೈ ಅಲರ್ಟ್ ಆಗಿದ್ದಾರೆ. ಅವರ ಮಕ್ಕಳ ಮೇಲೆ ನಿಗಾ ಇಡುತ್ತಿದ್ದಾರೆ. ಹೊರಗಡೆ ಹೋಗುವ, ಬರುವ ಬಗ್ಗೆ ನಿಗಾ ವಹಿಸುತ್ತಿದ್ದಾರೆ. ಮೊಬೈಲ್ ನಂಬರ್ ಬದಲಾಯಿಸಿದ್ದಾರೆ. ಡ್ರಗ್ ಪೆಡ್ಲರ್, ಡ್ರಗ್ ಮಾಫಿಯಾದಲ್ಲಿರುವವರ ಜೊತೆ ಫೋಟೋಗಳಿವೆಯಾ? ಅವರ ಕಾಂಟ್ಯಾಕ್ಟ್ ನಂಬರ್ ಇದೆಯಾ ಎಂಬುದನ್ನು ಚೆಕ್ ಮಾಡುತ್ತಿದ್ದಾರೆ.
ಸ್ಯಾಂಡಲ್‌ವುಡ್ ಡ್ರಗ್ ಮಾಫಿಯಾದಲ್ಲಿ ಒಬ್ಬೊಬ್ಬರದ್ದೇ ಹೆಸರು ಹೊರ ಬರುವುದೇ ತಡ, ರಾಜಕಾರಣಿಗಳಿಗೆ ಭಯ ಶುರುವಾಗಿದೆ. ಎಲ್ಲಿ ತಮ್ಮ ಮಕ್ಕಳು ಈ ಜಾಲದಲ್ಲಿದ್ದಾರೋ, ಎಲ್ಲಿ ತಮ್ಮ ಮರ್ಯಾದೆ ಹೋಗುತ್ತದೆಯೋ ಎಂಬ ಭಯ ಶುರುವಾಗಿದೆ.