Asianet Suvarna News Asianet Suvarna News

ಮನೆಯಲ್ಲೇ ತಯಾರಾಗ್ತಿತ್ತು ಡ್ರಗ್ಸ್; ಪೊಲೀಸರಿಂದ ರೋಚಕ ಕಾರ್ಯಾಚರಣೆ

Sep 16, 2021, 3:16 PM IST

ಬೆಂಗಳೂರು (ಸೆ. 16): ರಾಜ್ಯ ಪೊಲೀಸ್ ಇತಿಹಾಸದಲ್ಲಿ ಅತೀ ದೊಡ್ಡ ಡ್ರಗ್ಸ್ ಆಪರೇಷನ್ ಇದು. ಇದುವರೆಗೆ ಡ್ರಗ್ ಪೆಡ್ಲರ್‌ಗಳನ್ನು ಬಂಧಿಸುತ್ತಿದ್ದ ಪೊಲೀಸರು ಇದೇ ಮೊದಲ ಬಾರಿಗೆ ಸಿಂಥೆಟಿಕ್ ಡ್ರಗ್ಸ್ ಫ್ಯಾಕ್ಟರಿಯೊಂದನ್ನು ಪತ್ತೆ ಹಚ್ಚಿದ್ದಾರೆ.

ವಿದೇಶದಲ್ಲಿ ತಯಾರಾಗುತ್ತಿದ್ದ ಡ್ರಗ್ಸ್ ಎಲೆಕ್ಟ್ರಾನಿಕ್ಸ್ ಸಿಟಿಯ ಮನೆಯೊಂದರಲ್ಲಿ ತಯಾರಾಗುತ್ತಿತ್ತು. ಬೆಂಗಳೂರು ಸೇರಿದಂತೆ ಬೇರೆ ಬೇರೆ ರಾಜ್ಯಗಳಿಗೆ ರವಾನೆಯಾಗುತ್ತಿತ್ತು. ನಾರ್ಕೋಟಿಕ್ಸ್ ತಂಡ ಡ್ರಗ್ಸ್ ಫ್ಯಾಕ್ಟರಿ ಮೇಲೆ ದಾಳಿ ಮಾಡಿ ನೈಜೀರಿಯಾ ಮೂಲದ ಜಾನ್ ರನ್ನು ಬಂಧಿಸಿದೆ. ಬರೋಬ್ಬರಿ 5 ಕೋಟಿಗೂ ಹೆಚ್ಚು ಮೌಲ್ಯದ MDMA ಕ್ರಿಸ್ಟಲ್ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ.