ಕೇಳಿದಷ್ಟು ಲಂಚ ಕೊಡಬೇಕು, ಇಲ್ಲಾಂದ್ರೆ ಅರೆಸ್ಟ್​​..! ಇನ್ಸ್​​ಪೆಕ್ಟರ್​​​ ಲೋಕಾಯುಕ್ತ ಬಲೆಗೆ ಬಿದ್ದಿದ್ದೇ ರೋಚಕ..!

ಇತ್ತೀಚೆಗಷ್ಟೇ ಠಾಣೆಗೆ ಬಂದಿದ್ದ ಪೊಲೀಸ್ ಇನ್ಸ್​​ಪೆಕ್ಟರ್ ಗೋವಿಂದರಾಜು, ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ. ಕಾನೂನು ಪಾಲಿಸಬೇಕಾದ ಅಧಿಕಾರಿಯೇ ಹಣಕ್ಕಾಗಿ ಅಮಾಯಕರನ್ನು ಪೀಡಿಸುತ್ತಿದ್ದ ಈ ಪ್ರಕರಣ, ಪೊಲೀಸ್ ಇಲಾಖೆಯ ಭ್ರಷ್ಟಾಚಾರವನ್ನು ಬಯಲು ಮಾಡಿದೆ.

Share this Video
  • FB
  • Linkdin
  • Whatsapp

ಆತ ಪೊಲೀಸ್​​ ಇನ್ಸ್​​ಪೆಕ್ಟರ್​​. 6-7 ವರ್ಷ ವಿಐಪಿ ಸೆಕ್ಯುರಿಟಿ, ಪಿಎಸ್​​ಐ ಆಗಿ 6 ತಿಂಗಳ ಹಿಂದಷ್ಟೇ ಠಾಣೆಗೆ ಬಂದು ಸೆಟಲ್​ ಆಗಿದ್ದ. ಕಾನೂನು ಕಾಪಾಡ್ತೀನಿ ಅಂತ ಬಂದವನು ಮಾಡಿದ್ದು ಮಾತ್ರ ಹಲ್ಕಾ ಕೆಲಸ. ಅದೆಷ್ಟು ಕೊಟ್ಟು ಆ ಹುದ್ದೆಗೆ ಬಂದಿದ್ದನೋ ಏನೋ. ಆ ಹಣವನ್ನ ರಿಕವರಿ ಮಾಡಲು ಹೋಗಿ ಅಮಾಯಕರ ಜೀವ ಹಿಂಡುತ್ತಿದ್ದ. ಆದ್ರೆ ಎಲ್ಲದಕ್ಕೂ ಕ್ಲೈಮ್ಯಾಕ್ಸ್​​ ಅಂತ ಇರುತ್ತಲ್ಲ. ಇವತ್ತು ಆತನ ಪಾಪದ ಕೊಡ ತುಂಬಿತ್ತು. ಲಂಚ ತಗೆದುಕೊಳ್ಳುವಾಗ್ಲೇ ರೆಡ್​​ ಹ್ಯಾಂಡಾಗಿ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಅಷ್ಟಕ್ಕೂ ಅಲ್ಲಿ ಸಿಕ್ಕಿಬಿದ್ದ ಅಧಿಕಾರಿ ಯಾರು? ಆತನನ್ನ ಲೋಕಾಯುಕ್ತ ಟ್ರ್ಯಾಪ್​ ಮಾಡಿದ್ದಾದ್ರೂ ಹೇಗೆ? ಪೊಲೀಸಪ್ಪನೊಬ್ಬನ ಲಂಚಾವತಾರದ ಕಥೆ ನೋಡೋಣ ಬನ್ನಿ

ಪೊಲೀಸ್​​ ಆಗಲು ಬಂದವನು ಲಂಚಕೋರ ಆಗಿಬಿಟ್ಟ. ಲೋಕಾಯುಕ್ತ ಪೊಲೀಸರು ಗೋವಿಂದರಾಜುನನ್ನ ಸರಿಯಾಗೇ ಲಾಕ್​ ಮಾಡಿಕೊಂಡರು. ಅಷ್ಟಕ್ಕೂ ಇನ್ಸ್​​ಪೆಕ್ಟರ್​​ ಗೋವಿಂದರಾಜು ದೂರುದಾರನ ಬಳಿ ಲಂಚ ಕೇಳಿದ್ದೇಕೆ? ಆ ದೂರುದಾರ ಯಾವ ಕೇಸ್​​ನಲ್ಲಿ ಲಾಕ್​ ಆಗಿದ್ದ? ಆ ಪ್ರಕರಣ ಇನ್ನೂ ರೋಚಕವಾಗಿದೆ.

ಇಂಥವರಿಂದಲೆ ಡಿಪಾರ್ಟ್​ಮೆಂಟ್​ಗೆ ಕೆಟ್ಟ ಹೆಸರು ಬರುತ್ತಿರೋದು. ಆದ್ರೆ ಗೋವಿಂದರಾಜುರಂಥ ಕ್ರಿಮಿಗಳು ತುಂಬಾನೇ ಇವೆ.. ಅವರಿಗೂ ಒಂದು ದಾರಿ ತೋರಿಸಬೇಕು.

Related Video