ಇದು ಪೋಲೀಸರೇ ದಂಗಾದ ರಾಬರಿ ಕೇಸ್! ಕಳುವಾಗಿದ್ದು 10 ಲಕ್ಷ, ಸಿಕ್ಕಿದ್ದು 62 ಲಕ್ಷ!

ಕಳುವಾಗಿದ್ದು 10 ಲಕ್ಷ, ಸಿಕ್ಕಿದ್ದು 62 ಲಕ್ಷ!  ಚಿನ್ನದ ವ್ಯಾಪಾರಿ ಕೇಸ್‌ ಬೆನ್ನತ್ತಿದ್ದ ಪೊಲೀಸರಿಗೆ ಶಾಕ್!  ದೂರುದಾರನ ಬಂಡವಾಳ ಬಯಲು ಮಾಡಿದ ಕಳ್ಳರು.  ದೂರುದಾರ 85 ಲಕ್ಷ ದೋಚಲಾಗಿದೆ ಎಂದು ಹೇಳುತ್ತಿದ್ದು, ಹಲವು ಅನುಮಾನ.

Share this Video
  • FB
  • Linkdin
  • Whatsapp

ಬೆಂಗಳೂರು (ಜ.20): ಕಳುವಾಗಿದ್ದು 10 ಲಕ್ಷ, ಸಿಕ್ಕಿದ್ದು 62 ಲಕ್ಷ! ಚಿನ್ನದ ವ್ಯಾಪಾರಿ ಕೇಸ್‌ ಬೆನ್ನತ್ತಿದ್ದ ಪೊಲೀಸರಿಗೆ ಶಾಕ್! ದೂರುದಾರನ ಬಂಡವಾಳ ಬಯಲು ಮಾಡಿದ ಕಳ್ಳರು. ಜನವರಿ 10 ರಂದು ತನ್ನ ಹಣ ಕಳೆದುಕೊಂಡಿದ್ದ ವರುಣ್ ಸಿಂಗ್. ಕಳುವಾಗಿದ್ದು, 10 ಲಕ್ಷ ಆದರೆ ಸಿಕ್ಕಿದ್ದು 62 ಲಕ್ಷ ರೂಪಾಯಿ. ಚಿನ್ನದ ವ್ಯಾಪಾರಿಗಳಿಂದ ಹಣ ಪಡೆದು ತೆರಳುತ್ತಿದ್ದ ವರುಣ್ ಸಿಂಗ್ ಗೆ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದು ಪರಿಹಾರ ಕೇಳುವ ನೆಪದಲ್ಲಿ ಮಹಮ್ಮದ್ ಜಿಲಾನ್, ಅಬ್ದುಲ್ ವಹಾಬ್ ಮತ್ತು ಪೃಥ್ವಿಕ್ ಬಂಧಿತ ಆರೋಪಿಗಳು. ಹಣ ಕಳೆದುಕೊಂಡ ಕೃಷ್ಣಪ್ಪ ಮತ್ತು ವರುಣ್ ಸಿಂಗ್ 10 ಲಕ್ಷ ಕಾಣೆಯಾಗಿದೆ ಎಂದು ದೂರು ನೀಡಿದ್ದರು. ಸದ್ಯ ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ 62 ಲಕ್ಷ ರೂ ನಗದು ದೋಚಲಾಗಿದೆ. ಇದಾದ ಬಳಿಕ ವರುಣ್ ಸಿಂಗ್ 85 ಲಕ್ಷ ದೋಚಲಾಗಿದೆ ಎಂದು ಹೇಳುತ್ತಿದ್ದು, ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Related Video