Asianet Suvarna News Asianet Suvarna News

Honey Trap: ಚಿನ್ನಿ ಕೈಯಲ್ಲಿ ಚಿನ್ನದ ವ್ಯಾಪಾರಿ, ಮೇಕಪ್ ರಾಣಿಯ ನಿಜ ಬಣ್ಣ ಬಟಾಬಯಲು

ಮಂಡ್ಯದ ಪ್ರಖ್ಯಾತ ಚಿನ್ನದ ಅಂಗಡಿ ಮಾಲೀಕ ಜಗನ್ನಾಥ ಶೆಟ್ಟಿ(Jaganath Shetty) ಹನಿಟ್ರ್ಯಾಪ್ ಸುಳಿಗೆ ಸಿಲುಕಿ, 50 ಲಕ್ಷ ಕಳೆದುಕೊಂಡ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

First Published Aug 22, 2022, 5:27 PM IST | Last Updated Aug 22, 2022, 5:38 PM IST

ಮಂಡ್ಯ.(ಆಗಸ್ಟ್.22):  ಮಂಡ್ಯದ ಪ್ರಖ್ಯಾತ ಚಿನ್ನದ ಅಂಗಡಿ ಮಾಲೀಕ ಜಗನ್ನಾಥ ಶೆಟ್ಟಿ(Jaganath Shetty) ಹನಿಟ್ರ್ಯಾಪ್ ಸುಳಿಗೆ ಸಿಲುಕಿ, 50 ಲಕ್ಷ ಕಳೆದುಕೊಂಡ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಪ್ರತಿಭಟನೆ, ಹೋರಾಟದ ಹೆಸರಲ್ಲಿ ಸಭ್ಯಳಂತೆ ಬಿಲ್ಡಪ್ ಕೊಡ್ತಿದ್ದ ಸಲ್ಮಾ ಭಾನು(Salma bhanu) ಜಗನ್ನಾಥ ಶೆಟ್ಟಿಗೆ ಬಲೆ ಹೆಣೆದು ಇದೀಗ ಪೊಲೀಸರ ಅತಿಥಿಯಾಗಿದ್ದಾಳೆ.

ಆರೋಪಿಯನ್ನ ಪ್ರೇಯಸಿಯೊಂದಿಗೆ ಸರಸವಾಡಲು ಅವಕಾಶ ಕೊಟ್ಟ ಪೊಲೀಸರು ಸಸ್ಪೆಂಡ್

ಆರೋಪಿ ಸಲ್ಮಾ ಭಾನು ಮಂಡ್ಯ ನಗರದ ನಿವಾಸಿ. ಹೋರಾಟಗಾರ್ತಿಯ ಮುಖವಾಡ ಧರಿಸಿದ್ದ ಈಕೆ ಜನಪರ ವೇದಿಕೆ ಸಂಘಟನೆಯ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಗುರುತಿಸಿಕೊಂಡವಳು. ಸದಾ ಒಂದಲ್ಲ ಒಂದು ವಿಚಾರವನ್ನಿಟ್ಟುಕೊಂಡು ಹೋರಾಟ, ಪ್ರತಿಭಟನೆಗಳಲ್ಲಿ ಭಾಗಿಯಾಗುತ್ತಿದ್ದಳು. ಸಮಾಜ ಉದ್ದಾರ ಮಾಡ್ತೀವಿ ಅಂತ ಉದ್ದುದ್ದ ಭಾಷಣ ಬಿಗಿಯುತ್ತಿದ್ದ ಈಕೆ ಯಾವ ನಟಿಗೂ ಕಡಿಮೆ ಇಲ್ಲದ ಹಾಗೇ ಮೇಕಪ್ ಹಾಕಿಕೊಂಡು ಸದಾ ರೀಲ್ಸ್ ಮಾಡುತ್ತ ಶೋಕಿ ಮಾಡಿದ್ದೆ ಹೆಚ್ಚು. ಇದೀಗ ಈಕೆಯ ನಿಜ ಬಣ್ಣ ಬಯಲಾಗಿದೆ.

Video Top Stories