ಮುರುಘಾ ಮಠ ಶ್ರೀಗಳ ವಿರುದ್ಧ ಅತ್ಯಾಚಾರ ಆರೋಪ, ಜುಲೈ 25ಕ್ಕೆ ಬೆಂಗಳೂರಿಗೆ ಬಂದಿದ್ದ ವಿದ್ಯಾರ್ಥಿನಿಯರು!

ಮುರುಘಾ ಮಠದ ಸ್ವಾಮೀಜಿಗಳಿಂದ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ ಎಂದು ಆರೋಪಿಸಿ ಇಬ್ಬರು ವಿದ್ಯಾರ್ಥಿನಿಯರು ಒಡನಾಡಿ ಸಂಸ್ಥೆಯನ್ನು ಸಂಪರ್ಕಿಸಿದ್ದಾರೆ. ಇತ್ತ ಪೋಕ್ಸೋ ಕಾಯ್ದೆಯಡಿ ಶಿವಮೂರ್ತಿ ಸ್ವಾಮೀಜಿಗಳ ವಿರುದ್ಧ ದೂರು ದಾಖಲಾಗಿದೆ. ಹೆಸರಾಂತ ಮಠದ ವಿರುದ್ದ ದೂರು, ವಿದ್ಯಾರ್ಥಿನಿಯರ ಅಳಲು ಸೇರಿದಂತೆ ಇಡೀ ವೃತ್ತಾಂತ ಇಂದಿನ ನ್ಯೂಸ್ ಹವರ್ ವಿಡಿಯೋದಲ್ಲಿದೆ

First Published Aug 27, 2022, 10:45 PM IST | Last Updated Aug 27, 2022, 10:45 PM IST

ಅಪ್ರಾಪ್ತ ಬಾಲಕಿಯರಿಬ್ಬರು ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಸ್ವಾಮೀಜಿ ವಿರುದ್ಧ ಅತ್ಯಾಚಾರ ದೂರು ದಾಖಲಿಸಿದ್ದಾರೆ. ಮಠದ ಅಕ್ಕಮಹಾದೇವಿ ವಿದ್ಯಾರ್ಥಿನಿಲಯದಲ್ಲಿ ವಿದ್ಯಾಬ್ಯಾಸ ಮಾಡುತ್ತಿದ್ದ ವಿದ್ಯಾರ್ಥಿನಿಯರಿಬ್ಬರು ಮೈಸೂರಿನಲ್ಲಿ ದೂರು ದಾಖಲಿಸಿದ್ದಾರೆ. ಪೋಕ್ಸೋ ಕಾಯ್ದೆಯಡಿ ದೂರು ದಾಖಲಾಗಿದೆ.  ಆದರೆ ಮುರುಘಾ ಮಠ ಈ ಆರೋಪವನ್ನು ತಳ್ಳಿ ಹಾಕಿದೆ. ಮುರುಘಾ ಶ್ರೀಗಳ ವಿರುದ್ಧ ಅತ್ಯಾಚಾರ ಆರೋಪದ ಕುರಿತು ಮುರುಘಾ ಮಠದ ಸ್ವಾಮಿಗಳ ವಕೀಲ ವಿಶ್ವನಾಥಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಇದು ಸುಳ್ಳು ದೂರಾಗಿದ್ದು, ಮಠದ ವಿರೋಧಿ ಶಕ್ತಿಗಳು ಮಕ್ಕಳನ್ನು ದುರುಪಯೋಗ ಪಡಿಸಿಕೊಂಡು ದೂರು ನೀಡಲಾಗಿದೆ ಎಂದು ವಿಶ್ವನಾಥಯ್ಯ ಹೇಳಿದ್ದಾರೆ. ಅತ್ಯಾಚಾರ ಆರೋಪ ಮಾಡಿರುವ ವಿದ್ಯಾರ್ಥಿನಿಯರು ಜುಲೈ 25ಕ್ಕೆ ಬೆಂಗಳೂರಿಗೆ ಬಂದಿರುವ ಮಾಹಿತಿ ಲಭ್ಯವಾಗಿದೆ. ಈ ಬಾಲಕಿಯರು ಬೆಂಗಳೂರಿಗೆ ಬಂದಿದ್ದು ಹೇಗೆ? ಈ ಕುರಿತ ಸಂಪೂರ್ಣ ವಿವರ ಇಲ್ಲಿದೆ.