Drug Case: ಮಗಳನ್ನು ರಕ್ಷಿಸುವಂತೆ VHP ಗೆ ಕ್ರಿಶ್ಚಿಯನ್ ಮಹಿಳೆ ದೂರು, ಆರೋಪಿ ಸೆರೆ

ಡ್ರಗ್ (Drugs) ದಂಧೆಯಿಂದ ಮಗಳನ್ನು ರಕ್ಷಿಸಲು ತಾಯಿಯೊಬ್ಬರು ವಿಶ್ವ ಹಿಂದೂ ಪರಿಷತ್ ಗೆ  (VHP) ಪತ್ರ (Letter) ಬರೆದಿರುವ ಘಟನೆ ಮಂಗಳೂರಿನಲ್ಲಿ (Mangaluru)  ನಡೆದಿದೆ. 

First Published Dec 27, 2021, 4:07 PM IST | Last Updated Dec 27, 2021, 5:11 PM IST

ಬೆಂಗಳೂರು (ಡಿ. 27):  ಡ್ರಗ್ (Drugs) ದಂಧೆಯಿಂದ ಮಗಳನ್ನು ರಕ್ಷಿಸಲು ತಾಯಿಯೊಬ್ಬರು ವಿಶ್ವ ಹಿಂದೂ ಪರಿಷತ್ ಗೆ  (VHP) ಪತ್ರ (Letter) ಬರೆದಿರುವ ಘಟನೆ ಮಂಗಳೂರಿನಲ್ಲಿ (Mangaluru)  ನಡೆದಿದೆ.  ಮಂಗಳೂರಿನ ಕ್ರೈಸ್ತ ಮಹಿಳೆ ವಿಶ್ವ ಹಿಂದೂ ಪರಿಷತ್ ಮುಖಂಡರ ಮೊರೆ ಹೋಗಿದ್ದು ತಮ್ಮ ಮಗಳನ್ನು  ಡ್ರಗ್ಸ್ ಕೂಪದಿಂದ ಕರೆತರಲು ಕೋರಿದ್ದಾರೆ.  ಮಂಗಳೂರಿನ ಬಿಜೈ ಬಳಿಯ ಗ್ರೇಸಿ ಪಿಂಟೋ ಎಂಬ ಮಹಿಳೆ ಪತ್ರ ಬರೆದಿದ್ದು,  ಸುರತ್ಕಲ್ ನಿವಾಸಿ ಶರೀಫ್ ಸಿದ್ದಿಕಿ ಎಂಬಾತನ ಡ್ರಗ್ ದಂಧೆಯಲ್ಲಿ ತಮ್ಮ ಮಗಳು  ಸಿಲುಕಿದ್ದಾಳೆ.  ಕಳೆದ ಮೂರು ವರ್ಷಗಳಿಂದ ಡ್ರಗ್ ದಾಸಳಾಗಿರುವ ಮಗಳನ್ನು  ಸರಿಪಡಿಸಿ ತನಗೆ ನೀಡಬೇಕೆಂದು  ಪತ್ರದಲ್ಲಿ ತಿಳಿಸಿದ್ದಾರೆ. 

Suvarna FIR: ದಾವಣಗೆರೆ ಅಣ್ಣ- ತಮ್ಮಂದಿರಿಗೆ ಬಿಸಿಬಿಸಿ ಕಜ್ಜಾಯ, ಹೆಣ್ಣು ಮಗುವಿನ ಸಾವಿನ ಹಿಂದೆ..

ಮಗಳಿಗೆ ನಿರಂತರ ಲೈಂಗಿಕ ದೌರ್ಜನ್ಯ (Sexual Harassment) , ಡ್ರಗ್ ಪೂರೈಕೆ ಮಾಡುತ್ತಿದ್ದು ಮಗಳು ಡ್ರಗ್ (Drug) ಚಟಕ್ಕೆ ಬಿದ್ದು ಮಾನಸಿಕವಾಗಿ ಕುಗ್ಗಿ ಅಸ್ವಸ್ಥತೆ ‌ಒಳಗಾಗಿದ್ದಾಳೆ.  ಸಿದ್ದಿಕಿ ಮತ್ತು ಅವನ ಸ್ನೇಹಿತರಿಂದ ನಿರಂತರ ಡ್ರಗ್ ಪೂರೈಕೆ ಮತ್ತು ದೌರ್ಜನ್ಯ ನಡೆಯುತ್ತಿದ್ದು  ಪೊಲೀಸ್ ಠಾಣೆ (Police Station) ಮತ್ತು ಸಮುದಾಯದ ಗುರುಗಳಿಗೆ ದೂರು ಕೊಟ್ಟರೂ ನ್ಯಾಯ ಸಿಕ್ಕಿಲ್ಲ.   ನನ್ನ ಮಗಳನ್ನ ರಕ್ಷಣೆ ಮಾಡಿ ಎಂದು ವಿಎಚ್ ಪಿಗೆ ಪತ್ರ ಬರೆದು ಮಹಿಳೆ ದಂಧೆಯಿಂದ ಮುಕ್ತಿ ಕೋರಿದ್ದಾರೆ. ಇದೀಗ ಸಿದ್ದಿಕಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಏಷ್ಯಾನೆಟ್ ಸುವರ್ಣ ನ್ಯೂಸ್ ಬಿಗ್ ಇಂಪ್ಯಾಕ್ಟ್ ಇದು.