ಇನ್‌ಸ್ಟಾಗ್ರಾಮ್‌ನಲ್ಲಿರುವ ಮಹಿಳೆಯರೇ ನಿಶಾ ಟಾರ್ಗೆಟ್‌: ಫೋಟೋಶೂಟ್‌ ಹೆಸರಲ್ಲಿ ಪಂಗನಾಮ

ನಿಶಾ ನರಸಪ್ಪ ವನ್ಷಿಕಾ ಹೆಸರಲ್ಲದೇ ಸೆಲೆಬ್ರೆಟಿಗಳ ಹೆಸರನ್ನೂ ಸಹ ವಂಚನೆಗೆ ಬಳಸಿಕೊಂಡಿದ್ದಾಳೆ. ಅಲ್ಲದೇ ಇನ್‌ಸ್ಟಾಗ್ರಾಮ್‌ ಹೆಚ್ಚಾಗಿ ಬಳಸುವ ಮಹಿಳೆಯರೇ ಈಕೆಯ ಟಾರ್ಗೆಟ್‌ ಆಗಿದ್ದರು.
 

Share this Video
  • FB
  • Linkdin
  • Whatsapp

ಬೆಂಗಳೂರು: ನಿಶಾ (Nisha) ಪ್ರಕರಣ ಕೆದಕುತ್ತಾ ಹೋದಷ್ಟೂ ಮತ್ತಷ್ಟೂ ವಂಚನೆ ಪುರಾಣಗಳು ಬಯಲಾಗುತ್ತಿವೆ. ನಿಶಾ ಕೇವಲ ವನ್ಷಿಕಾ(Vanshika) ಹೆಸರಷ್ಟೇ ಅಲ್ಲದೇ, ಸೆಲೆಬ್ರೆಟಿಗಳ ಹೆಸರೇಳಿಕೊಂಡು ಮೋಸ ಮಾಡಿರುವುದು ಬೆಳಕಿಗೆ ಬಂದಿದೆ. ಇನ್‌ಸ್ಟಾಗ್ರಾಮ್‌ನನ್ನು(Instagram) ಹೆಚ್ಚಾಗಿ ಬಳಕೆ ಮಾಡುವ ಮಹಿಳೆಯರೇ ನಿಶಾ ಟಾರ್ಗೆಟ್‌ ಆಗಿದ್ದರು. ಜೊತೆಗೆ ತುಂಬಾ ಸುಂದರವಾದ ತಾಯಿ-ಮಗಳ ಫೋಟೋ ಇದ್ದರೇ, ಅಂತವರಿಗೆ ನಿಶಾ ಗಾಳ ಹಾಕುತ್ತಿದ್ದಳು. ಅಲ್ಲೇ ಚಾಟ್‌ ಮಾಡುವ ಮೂಲಕ ನಿಶಾ ಬಲೆ ಬೀಸುತ್ತಿದ್ದಳು. ಬಳಿಕ ಫೋಟೋಶೂಟ್‌(photoshoot) ಹೆಸರಲ್ಲಿ ಹಣ ಪಡೆದು ಮೋಸ ಮಾಡುತ್ತಿದ್ದಳು. ಒಂದು ಮಗುವಿಗೆ ಆ್ಯಡ್‌ ಶೂಟ್‌ಗೆ ಹತ್ತು ಸಾವಿರ ಪಡೆಯುತ್ತಿದ್ದಳು ಎಂದು ತಿಳಿದುಬಂದಿದೆ. ಅಲ್ಲದೇ ಫೋಟೋಗ್ರಾಫರ್‌ಗೂ ಹಣ ಕೊಡದೇ ವಂಚಿಸಿದ್ದಾಳೆ ಎನ್ನಲಾಗ್ತಿದೆ. 

ಇದನ್ನೂ ವೀಕ್ಷಿಸಿ:  ಇಂದು ಜ್ಯೋತಿರ್ಭೀಮೇಶ್ವರ ಅಮಾವಾಸ್ಯೆ: ಈ ರಥ ಆಚರಣೆ ಹಿಂದಿನ ಮಹತ್ವೇನು ಗೊತ್ತಾ ?

Related Video