Banavara Accident: ಗೆಳತಿಯ ಸಾವಿಗೆ ಸ್ನೇಹಿತೆಯರ ಮುಗಿಲು ಮುಟ್ಟಿದ ಆಕ್ರಂದನ

ಅರಸೀಕೆರೆ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿ ಪ್ರಕರಣ 9 ಜನ ಸಾವನ್ನಪ್ಪಿರುವ ಘಟನೆ ಇಡೀ ರಾಜ್ಯವನ್ನೇ ತಲ್ಲಣಗೊಳಿಸಿದೆ. ಇದು ಕರಾಳ ಭಾನುವಾರ ಎನಿಸಿಕೊಂಡಿದೆ.

Share this Video
  • FB
  • Linkdin
  • Whatsapp

ಅರಸೀಕೆರೆ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿ ಪ್ರಕರಣ 9 ಜನ ಸಾವನ್ನಪ್ಪಿರುವ ಘಟನೆ ಇಡೀ ರಾಜ್ಯವನ್ನೇ ತಲ್ಲಣಗೊಳಿಸಿದೆ. ಇದು ಕರಾಳ ಭಾನುವಾರ ಎನಿಸಿಕೊಂಡಿದೆ. ಮರಣೋತ್ತರ ಪರೀಕ್ಷೆ ಮುಗಿಸಿರುವ ವೈದ್ಯರು ಶವವನ್ನು ಕುಟುಂಬ ವರ್ಗಕ್ಕೆ ಹಸ್ತಾಂತರಿಸಿದ್ದು, ಅಂತ್ಯ ಸಂಸ್ಕಾರ ಆಯಾ ಕುಟುಂಬವರು ನಡೆಸಲು ಸಿದ್ದತೆ ಮಾಡಿದ್ದಾರೆ. ಗಂಡನ ಮನೆ ಬಾಣಾವರದಲ್ಲಿ ಚೈತ್ರಾ ಹಾಗೂ ಇಬ್ಬರು ಮಕ್ಕಳ ಅಂತ್ಯ ಸಂಸ್ಕಾರ ನಡೆಯಲಿದೆ. ದೊಡ್ಡಯ್ಯ ಪತ್ನಿ ಭಾರತಿ ಹಾಗೂ ವಂದನಾ ಅವರದ್ದು ತಾರಾಪುರದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ. ಶವಾಗಾರದ ಮುಂದೆ ವಂದನಾ ಸ್ನೇಹಿತರು ಆಕೆಯನ್ನು ನೆನೆದು ಕಣ್ಣೀರಿಡುತ್ತಿರುವ ದೃಶ್ಯ ಎಂತವರಿಗೂ ಕರುಳು ಹಿಂಡುವಂತಿತ್ತು. 

Related Video