Asianet Suvarna News Asianet Suvarna News

ಸೆಕ್ಯುರಿಟಿ ಬೆದರಿಸಿ SUV ಕದ್ದ ನೈಜೇರಿಯಾ ಪ್ರಜೆ ಅರೆಸ್ಟ್

  •  ಕಿಯಾ ಕಾರು ಶೋರೂಂಗೆ ನುಗ್ಗಿ ಸೆಕ್ಯುರಿಟಿ ಗಾರ್ಡ್‌ಗೆ ಮಚ್ಚು ತೋರಿಸಿ ಕಾರು ಕಳವು
  • ನೈಜಿರಿಯನ್ ಪ್ರಜೆಗಳ ಟೀಂನಿಂದ ಕಿಯಾ ಕಾರು ಶೋರೂಂನಲ್ಲಿ ಕಳ್ಳತನ
  • ಬೆಂಗಳೂರಿನಲ್ಲಿ ಕದ್ದ ಕಾರುಗಳನ್ನು ಚೆನ್ನೈ, ಪುಣೆ ಮತ್ತು ಮುಂಬೈನಲ್ಲಿ ಕಡಿಮೆ ಬೆಲೆಗೆ ಮಾರಾಟ

ಬೆಂಗಳೂರು (ಜೂ.4): ಸೈಬರ್ ಚೀಟಿಂಗ್ ಆಯ್ತು, ಡ್ರಗ್ ಮಾಫಿಯಾ ಆಯ್ತ, ಈಗ ಮಚ್ಚು ಹಿಡಿದ ನೈಜಿರಿಯನ್ ಪ್ರಜೆಗಳು. ವಿದೇಶಿಯರ ಟೀಂನಿಂದ ಕಿಯಾ ಕಾರು ಶೋರೂಂಗೆ ನುಗ್ಗಿ ಸೆಕ್ಯುರಿಟಿ ಗಾರ್ಡ್‌ಗೆ ಮಚ್ಚು ತೋರಿಸಿ, ಕಿಯಾ ಸೆಲ್ಟಾಸ್ ಕಾರು ಕಳ್ಳತನ ಮಾಡಿದ ಖದೀಮರು. ಬೆಂಗಳೂರಿನಲ್ಲಿ ಕದ್ದ ಕಾರುಗಳನ್ನು ಚೆನ್ನೈ, ಪುಣೆ ಮತ್ತು ಮುಂಬೈನಲ್ಲಿ ಕಡಿಮೆ ಬೆಲೆಗೆ ಮಾರುತ್ತಿತ್ತು ಈ ಗ್ಯಾಂಗ್. 

ಒಬ್ಬ ನೈಜಿರಿಯನ್ ಹಾಗೂ ಮತ್ತೊಬ್ಬ ಲಿಬಿಯಾ ಪ್ರಜೆ ನಗರದಲ್ಲಿ ಐಷಾರಾಮಿ ಕಾರು ಹಾಗೂ ಬೈಕ್‌ಗಳನ್ನು ಕದಿಯುತ್ತಿದ್ದರು. ಯಲಹಂಕ ಪೊಲೀಸರು ಲಿಬಿಯಾದ ಸಫಿ ಈಡನ್ ಗುಮಾ ತಾಹಿರ್ ಬೆನ್ ಮತ್ತು ನೈಜಿರಿಯಾದ ಜಾಹ್ನ್ ನ್ಯಾರೊ ಅವರನ್ನು ಬಂಧಿಸಿದ್ದಾರೆ. ಫೆಬ್ರವರಿಯಲ್ಲಿ ನಡೆದ ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. 

ಆನ್‌ಲೈನ್ ಖಾತೆ ಕನ್ನ ತಪ್ಪಿಸಲು ಬೆಂಗಳೂರು ಪೊಲೀಸ್ ಗೋಲ್ಡನ್ ಅವರ್ ..

ಬಂಧಿತರಿಂದ 65.2 ಲಕ್ಷ ಮೌಲ್ಯದ ಎರಡು ಕಿಯಾ, ಒಂದು ಫಾರ್ಚ್ಯುನರ್ ಹಾಗೂ ಮೂರು ಬೈಕ್ ಜಪ್ತಿ ಮಾಡಲಾಗಿದೆ. ಆರೋಪಿಗಳು ತಮಿಳುನಾಡಿನ ಅಣ್ಣಾಮಲೈ ಯುನಿವರ್ಸಿಟಿಯಲ್ಲಿ ಎಂಎ ರಾಜ್ಯಶಾಸ್ತ ಮತ್ತು ಬಿಇ ಎಲೆಕ್ಟ್ರಿಕಲ್ ವ್ಯಾಸಾಂಗ ಮಾಡುತ್ತಿದ್ದರು. ಶಿಕ್ಷಣ ವೀಸಾದಡಿ ಬಂದು, ವೀಸಾ ಅವಧಿ ಮುಗಿದರೂ ಅಕ್ರಮವಾಗಿ ನೆಲೆಸಿದ್ದರು.

Video Top Stories