ಅಣ್ಣನಂತಿದ್ದವನನ್ನೇ ಕೊಂದು ಮುಗಿಸಿದ್ದ ರೌಡಿ ಶೀಟರ್!
ಸರಿಯಾಗಿ 2 ವಾರಗಳ ಹಿಂದೆ ತುಮಕೂರಿನ ಗುಬ್ಬಿ ತಾಲೂಕಿಗೆ ತಾಲೂಕೇ ಬೆಚ್ಚಿ ಬಿದ್ದಿತ್ತು. ಅವತ್ತು ದಲಿತ ಮುಖಂಡ. ಪಟ್ನ ಪಂಚಾಯಿತಿಯ ಮಾಜಿ ಉಪಾಧ್ಯಕ್ಷನಾಗಿದ್ದವನ ಬರ್ಬರ ಕೊಲೆಯಾಗಿತ್ತು.
ಬೆಂಗಳೂರು (ಜೂನ್ 29): ಎರಡು ವಾರಗಳ ಹಿಂದೆ ತುಮಕೂರಿನ (Tumkur) ಗುಬ್ಬಿ (Gubbi) ಪಣ್ಣದಲ್ಲಿ ದಲಿತ ಸಂಘರ್ಷ ಸಮಿತಿ ಮುಖಂಡ, ಪಟ್ಟಣ ಪಂಚಾಯಿತಿಯ ಮಾಜಿ ಉಪಾಧ್ಯಕ್ಷನಾಗಿದ್ದ ನರಸಿಂಹಮೂರ್ತಿ (Narasimhamurthy) ಎನ್ನುವವರ ಬರ್ಬರ ಹತ್ಯೆಯಾಗಿತ್ತು. ಇದರ ಬೆನ್ನಲ್ಲಿಯೇ ಈ ಕೊಲೆ ಕೇಸ್ ಗೆ ದೊಡ್ಡ ಟ್ವಿಸ್ಟ್ ಸಿಕ್ಕಿದೆ.
ತನ್ನೂರಿನಲ್ಲಿ ಆಪ್ಭಾಂದವನಂತಿದ್ದ ವ್ಯಕ್ತಿಯನ್ನು ಹಾಡಹಗಲೇ ರೌಡಿ ಶೀಟರ್ ಕೊಲೆ ಮಾಡಿದ್ದ. ದೇವರಂಥ ಮನುಷ್ಯನನ್ನು ಯಾರು ಕೊಂದಿದ್ದು ಅನ್ನೋದು ಆತನ ಆಪ್ತರಿಗೆ ಗೊತ್ತಾಗಿರಲಿಲ್ಲ. ದಲಿತ ನಾಯಕನನ್ನು ಕೊಂದಿದ್ದು ಮತ್ತೊಬ್ಬ ದಲಿತನೇ ಆಗಿದ್ದ.
ದಲಿತ ಮುಖಂಡ ನರಸಿಂಹಮೂರ್ತಿ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್!
ಅಣ್ಣನಂತಿದ್ದವನನ್ನೇ ರೌಡಿ ಶೀಟರ್ ಕೊಲೆ ಮಾಡಿದ್ದ. ಸುಪಾರಿಗೂ ಮೊದಲೇ ಕೊಲೆಗಾರರಿಗೆ ಒಂದು ಕಂಡೀಷನ್ ಕೂಡ ಹಾಕಲಾಗಿತ್ತು. ಕಾರ್ ಹಾಗೂ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ರಸ್ತೆಯ ಪಕ್ಕ ನಿಂತಿದ್ದ ನರಸಿಂಹಮೂರ್ತಿಯನ್ನು ಕೊಲೆ ಮಾಡಿದ್ದರು. ಅವರು ಮಾಡಿದ ದಾಳಿ ಹೇಗಿತ್ತೆಂದರೆ ನರಸಿಂಹ ಮೂರ್ತಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದ.