ಅಪ್ರಾಪ್ತ ಬಾಲಕಿಯ ಮೇಲಿನ ಅತ್ಯಾಚಾರ, ಕೊಲೆ ಖಂಡಿಸಿ ಮುಸ್ಲಿಂ ಸಮುದಾಯದವರಿಂದ ಮೆರವಣಿಗೆ
ಟ್ಯೂಷನ್‌ಗೆ ತೆರಳಿದ್ದ 10 ವರ್ಷದ ಬಾಲಕಿ ಮೇಲೆ 52 ವರ್ಷದ ವ್ಯಕ್ತಿ ಅತ್ಯಾಚಾರಗೈದು ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ. ಕೊಲೆ ಖಂಡಿಸಿ ಮುಸ್ಲಿಂ ಸಮುದಾಯದವರಿಂದ ಮೆರವಣಿಗೆ ನಡೆದಿದೆ. ಮಳವಳ್ಳಿಯ ಮುಖ್ಯ ರಸ್ತೆಯಲ್ಲಿ ಬೇಕು ಬೇಕು ನ್ಯಾಯ ಬೇಕು ಅಂತ ಘೋಷಣೆ ಮುಸ್ಲಿಂ ಮುಂಖಂಡರು ಘೋಷಣೆ ಕೂಗಿದ್ದಾರೆ.
ಅಪ್ರಾಪ್ತ ಬಾಲಕಿಯ ಮೇಲಿನ ಅತ್ಯಾಚಾರ, ಕೊಲೆ ಖಂಡಿಸಿ ಮುಸ್ಲಿಂ ಸಮುದಾಯದವರಿಂದ ಮೆರವಣಿಗೆ ನಡೆದಿದೆ. ಮಳವಳ್ಳಿಯ ಮುಖ್ಯ ರಸ್ತೆಯಲ್ಲಿ ಬೇಕು ಬೇಕು ನ್ಯಾಯ ಬೇಕು ಅಂತ ಘೋಷಣೆ ಮುಸ್ಲಿಂ ಮುಂಖಂಡರು ಘೋಷಣೆ ಕೂಗಿದ್ದಾರೆ. ಬಾಲಕಿಯ ಭಾವಚಿತ್ರ ಹಿಡಿದು ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ಮಾಡ್ತಿರೋ ಮುಸ್ಲಿಂ ಸಮುದಾಯದವರು. ಕೃತ್ಯ ಎಸಗಿರೋ ಕಾಂತರಾಜುವನ್ನ ಗಲ್ಲಿಗೆ ಏರಿಸಬೇಕು. ಇಂತಹ ಕೃತ್ಯಗಳು ಮತ್ತೆ ನಮ್ಮ ಸಮಾಜದಲ್ಲಿ ನಡೆಯಲೆಬಾರದು. ಈತನಿಗೆ ಗಲ್ಲು ಶಿಕ್ಷೆ ವಿಧಿಸಿದರೆ, ಸಮಾಜಕ್ಕೆ ಒಂದು ಸಂದೇಶ ನೀಡಿದಂತೆ ಆಗಲಿದೆ. ರಾಜ್ಯ ಸರ್ಕಾರ ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲೇಬೇಕು ಎಂದು ಒತ್ತಾಯಿಸಲಾಗಿದೆ. ಟ್ಯೂಷನ್‌ಗೆ ತೆರಳಿದ್ದ 10 ವರ್ಷದ ಬಾಲಕಿ ಮೇಲೆ 52 ವರ್ಷದ ವ್ಯಕ್ತಿ ಅತ್ಯಾಚಾರಗೈದು ಕೊಲೆ ಮಾಡಿರುವುದು ಇಡೀ ಸಮಾಜವೇ ತಲೆತಗ್ಗಿಸುವ ಸಂಗತಿಯಾಗಿದೆ. ಕಾಮುಕ ವ್ಯಕ್ತಿಗೆ ಕಠಿಣ ಶಿಕ್ಷೆ ವಿಧಿಸಿ ಬಾಲಕಿ ಕುಟುಂಬಕ್ಕೆ ನ್ಯಾಯ ದೊರಕಿಸಬೇಕು ಎಂದು ಪಟ್ಟಣದ ನಾಗರಿಕರು ಕೂಡ ಒತ್ತಾಯಿಸಿದ್ದಾರೆ.