Murugha Mutt 2ನೇ ದಿನವೂ ಆರೋಗ್ಯದಲ್ಲಿ ಏರುಪೇರು, ನಾಳೆ ಮಠದಲ್ಲಿ ಸ್ಥಳ ಮಹಜರು!
ಪೊಲೀಸರ ಪ್ರಶ್ನೆಗೆ ಥಂಡಾ ಹೊಡೆದರಾ ಸ್ವಾಮೀಜಿ..? ಡಿವೈಎಸ್ಪಿ ಕಚೇರಿಯಲ್ಲಿ ಮುಂದುವರಿದ ವಿಚಾರಣೆ. ನಾಳೆ ಮುರುಘಾ ಮಠದಲ್ಲಿ ನಡೆಯಲಿದೆ ಮಹಜರು!
ಪೋಕ್ಸೋ ಕೇಸ್ ಅಡಿಯಲ್ಲಿ ಅರೆಸ್ಟ್ ಆಗಿರುವ ಮುರುಘಾ ಮಠದ ಶಿವಮೂರ್ತಿ ಸ್ವಾಮೀಜಿ ತನಿಖಾಧಿಕಾರಿ ಎದುರು ಪ್ರಶ್ನೆಗಳಿಗೆ ಉತ್ತರಿಸದೇ ಮೌನಕ್ಕೆ ಜಾರಿದ್ದಾರೆ. ಖಾಕಿ ಪ್ರಶ್ನೆಗೆ 2ನೇ ದಿನವೂ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆ ದಾಖಲಾಗಿದ್ದಾರೆ. ನಾಳೆ ಮುರುಘಾ ಮಠದಲ್ಲಿ ಸ್ಥಳ ಮಹಜರು ನಡೆಯಲಿದೆ. ಶ್ರೀಗಳ ವಿರುದ್ಧ ದೂರು ನೀಡಿದ ವಿದ್ಯಾರ್ಥಿನಿಯರು ಮಠ ಬಿಟ್ಟು ಬಂದ ಮೇಲೆ ಎಲ್ಲಿದ್ದರು? ಪೊಲೀಸ್ ಠಾಣೆಯಲ್ಲಿ ವಿದ್ಯಾರ್ಥಿನಿಯ ಚಿಕ್ಕಪ್ಪ ಬರೆದುಕೊಟ್ಟ ಮುಚ್ಚಳಿಕೆ ಸುಳ್ಳಾ? ಚಿಕ್ಕಪ್ಪನಿಂದ ಖಾಲಿ ಪತ್ರದಲ್ಲಿ ಸಹಿ ಹಾಕಿಸಿಕೊಳ್ಳಲಾಗಿದೆಯಾ? ಈ ಅನುಮಾನಕ್ಕೆ ಸ್ವತಃ ವಿದ್ಯಾರ್ಥಿನಿಯ ಚಿಕ್ಕಪ್ಪ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ