
ಜ್ಯೋತಿಷಿ ಪ್ರಮೋದ್ ದರೋಡೆ: ಆಪ್ತ ಸಹಾಯಕಿ ಮೇಘನಾಳೇ ಮಾಸ್ಟರ್‌ಮೈಂಡ್!
ಖತರ್ನಾಕ್ ಕಳ್ಳರ ಟೀಂನ ಹೆಡೆಮುರಿ ಕಟ್ಟಿದ್ದೇ ಬಲು ರೋಚಕವಾಗಿದೆ
ಬೆಂಗಳೂರು(ಜು.14): ಜ್ಯೋತಿಷಿ ಕೈಕಾಲು ಕಟ್ಟಿ ಚಿನ್ನ ದೋಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಲೇಡಿ ಕಿಂಗ್‌ಪಿನ್ ಕೈವಾಡ ಇದೀಗ ಬಯಲಾಗಿದೆ. ಖತರ್ನಾಕ್ ಕಳ್ಳರ ಟೀಂನ ಹೆಡೆಮುರಿ ಕಟ್ಟಿದ್ದೇ ಬಲು ರೋಚಕವಾಗಿದೆ. ಮೇಘನಾ ಎಂಬಾಕೆಯೇ ಈ ದರೋಡೆ ಹಿಂದಿನ ಮಾಸ್ಟರ್ ಮೈಂಡ್. ಸದ್ಯ ಮೇಘನಾ ಮತ್ತು ಅವರ ಗ್ಯಾಂಗ್‌ಅನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ಸೇಲಂನಲ್ಲಿ ಬಂಧಿಸಿ ಮೇಘನಾ ಅಂಡ್ ಟೀಂನ ಪೊಲೀಸರು ಕರೆತಂದಿದ್ದಾರೆ. ಮೇಘನಾ ಜ್ಯೋತಿಷಿ ಪ್ರಮೋದ್ ಅವರ ಪಿಎ ಆಗಿದ್ದಾಳೆ ಅಂತ ತಿಳಿದು ಬಂದಿದೆ.
ಬೆಂಗಳೂರು: ಹಾಡಹಗಲೇ ಜ್ಯೋತಿಷಿ ಮನೆ ರಾಬರಿ: ನಗದು, ಚಿನ್ನಾಭರಣ ಎಗರಿಸಿ ಎಸ್ಕೇಪ್