Mangalore Family Suicide: ಬಲವಂತದ ಮತಾಂತರ, ಮರು ಮದುವೆ ಆಮೀಷ, ಇಡೀ ಕುಟುಂಬವೇ ಬಲಿ

 ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ ಕೇಸ್‌ಗೆ (Family Suicide) ಟ್ವಿಸ್ಟ್ ಸಿಗುತ್ತಿದೆ. ಹೆಂಡತಿ, ಮಕ್ಕಳನ್ನು ಕೊಂದು ಪತಿ ನಾಗೇಶ್ ನೇಣಿಗೆ ಶರಣಾಗಿದ್ದರು. ಬಲವಂತದ ಮತಾಂತರಕ್ಕೆ ಇಡೀ ಕುಟುಂಬ ಬಲಿಯಾಗಿದೆ. 

Share this Video
  • FB
  • Linkdin
  • Whatsapp

ಮಂಗಳೂರು (ಡಿ. 11): ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ ಕೇಸ್‌ಗೆ (Suicide) ಟ್ವಿಸ್ಟ್ ಸಿಗುತ್ತಿದೆ. ಹೆಂಡತಿ, ಮಕ್ಕಳನ್ನು ಕೊಂದು ಪತಿ ನಾಗೇಶ್ ನೇಣಿಗೆ ಶರಣಾಗಿದ್ದರು. ಬಲವಂತದ ಮತಾಂತರಕ್ಕೆ (Conversion) ಇಡೀ ಕುಟುಂಬ ಬಲಿಯಾಗಿದೆ. 

ಮತಾಂತರಕ್ಕಾಗಿ ಮದುವೆ ಜಾಲ ಬೀಸಿದ್ದಳು ನೂರ್‌ಜಹಾನ್. ನೂರ್‌ಜಹಾನ್ ಬಳಿ ನಾಗೇಶ್ ಪತ್ನಿ ವಿಜಯಲಕ್ಷ್ಮೀ ಕೆಲಸಕ್ಕೆ ಹೋಗುತ್ತಿದ್ದಳು. ಆ ಸಂದರ್ಭದಲ್ಲಿ ವಿಜಯಲಕ್ಷ್ಮೀಗೆ ಮತಾಂತರದ ಮಂಕುಬೂದಿ ಎರಚಿದ್ಧಾಳೆ. ಪತಿ-ಪತ್ನಿಯರ ನಡುವಿನ ಜಗಳವನ್ನು ಬಳಸಿಕೊಂಡು, ನಾಗೇಶ್‌ಗೆ ಡಿವೋರ್ಸ್‌ ಕೊಡು. ಇಸ್ಲಾಂಗೆ ಮತಾಂತರವಾಗು, ಇನ್ನೊಂದು ಮದುವೆ ಮಾಡಿಸುತ್ತೇನೆ ಎಂದು ಆಮೀಷವೊಡ್ಡಿದ್ದಾಳೆ. ಈ ವಿಚಾರ ಗೊತ್ತಾಗುತ್ತಿದ್ದಂತೆ ನಾಗೇಶ್ ಪತ್ನಿ, ಮಕ್ಕಳಿಗೆ ವಿಷವಿಕ್ಕಿ, ತಾನು ನೇಣಿಗೆ ಶರಣಾಗಿದ್ದಾನೆ. 

Related Video