ಇಬ್ಬರೂ ಜೀವದ ಗೆಳೆತಿಯರು, ಇಬ್ಬರಿಗೂ ಒಬ್ಬನೇ ಬಾಯ್‌ಫ್ರೆಂಡ್! ಗೆಳತಿ ಸತ್ತಳು ಅಂತ ಅವನೂ ಸತ್ತ!
ಪ್ರೀತಿಸಿದವ ಬಿಟ್ಟು ಹೋದಾಗ ಮತ್ತೊಬ್ಬನನ್ನು ಮದುವೆಯಾದ ಹೆಣ್ಣುಮಗಳು, ಗಂಡನ ಅನುಮಾನದಿಂದ ಬೇಸತ್ತು ನಾಪತ್ತೆಯಾಗಿ ನಾಲ್ಕನೇ ದಿನ ಶವವಾಗಿ ಪತ್ತೆಯಾಗಿದ್ದಾಳೆ. ಇದರ ಹಿಂದಿನ ನಿಗೂಢತೆಯನ್ನು ಈ ಸ್ಟೋರಿ ತಿಳಿಸುತ್ತದೆ.
ಬೆಂಗಳೂರು (ಡಿ.19): ಅವಳು ಸುಂದರ ಹೆಣ್ಣು ಮಗಳು. ಕಾಲೇಜಿಗೆ ಹೋಗಬೇಕಾದ್ರೆ ಒಬ್ಬನನ್ನ ತುಂಬಾನೇ ಪ್ರೀತಿಸುತ್ತಿದ್ಲು. ಆದ್ರೆ ಆ ಲವ್ವರ್ ಬೇರೊಬ್ಬಳನ್ನ ಮದುವೆಯಾಗಿಬಿಟ್ಟ. ಇನ್ನೇನು ಮಾಡೋದು ಅಂತ ಈಕೆ ಮತ್ತೊಬ್ಬನ ಜೊತೆ ಮದುವೆಯಾದಳು.
ಆದ್ರೆ ಆಕೆಯ ಗಂಡನಿಗೆ ಇವಳ ಮೇಲೆ ವಿಪರೀತ ಅನುಮಾನ. ಒಮ್ಮೆ ಅಂತೂ ಈಕೆ ನನಗೆ ಬೇಡವೇ ಬೇಡ ಅಂತ ಹೇಳಿಬಿಟ್ಟ. ಆವತ್ತು ಹೀಗೆ ಮನೆಯಲ್ಲಿ ಜಗಳವಾಗಿತ್ತು. ಆದ್ರೆ ಅದೇ ದಿನ ಔಷಧಿ ತರುತ್ತೇನೆ ಅಂತ ಮನೆಯಿಂದ ಹೋದವಳು ನಾಪತ್ತೆಯಾಗಿಬಿಟ್ಟಿದ್ದಳು.
ನೆನಪನ್ನ ಸೋಪಾಕಿ ತೊಳ್ಕೊಳ್ಳೋದು ಬಿಟ್ಟು, ಜೀವ ಕಳ್ಕೊಂಡ ವಿವಾಹಿತ ಪ್ರೇಮಿಗಳು!
ಆಗಲೂ ಗಂಡ ಅವಳು ಬೇರೊಬ್ಬನ ಜೊತೆ ಓಡಿ ಹೋಗಿದ್ದಾಳೆ ಅಂತಲೇ ಅಂದುಕೊಂಡಿದ್ದ. ಆದ್ರೆ ಆಕೆ ನಾಪತ್ತೆಯಾಗಿ ನಾಲ್ಕನೇ ದಿನಕ್ಕೆ ಊರಾಚೆ ಹೆಣವಾಗಿ ಸಿಕ್ಕಿದ್ದಳು. ಹಾಗಾದ್ರೆ ಅನುಮಾನ ಗಂಡನಿಂದ ಬೇಸತ್ತೇ ಆ ಹೆಣ್ಣುಮಗಳು ಸಾವನ್ನಪ್ಪಿದ್ಲಾ..? ಅಥವಾ ಈ ಸಾವಿನ ಹಿಂದೆ ಮತ್ತೊಂದು ಕಥೆ ಇದ್ಯಾ..? ಒಬ್ಬ ಸುಂದರ ಹೆಣ್ಣುಮಗಳೊಬ್ಬಳ ದುರಂತ ಅಂತ್ಯದ ಸ್ಟೋರಿ.