ನೆನಪನ್ನ ಸೋಪಾಕಿ ತೊಳ್ಕೊಳ್ಳೋದು ಬಿಟ್ಟು, ಜೀವ ಕಳ್ಕೊಂಡ ವಿವಾಹಿತ ಪ್ರೇಮಿಗಳು!
ಮಂಡ್ಯದ ಮದ್ದೂರಿನಲ್ಲಿ ವಿವಾಹಿತ ಪ್ರೇಮಿಗಳ ಡೆತ್ ಕಹಾನಿ ಜಿಲ್ಲೆಯಲ್ಲಿ ಚರ್ಚೆ ಹುಟ್ಟುಹಾಕಿದೆ. ಮದುವೆಯಾಗಿದ್ರು ಹಳೇ ಪ್ರೇಮಿಗಾಗಿ ಸೂಸೈಡ್ ಮಾಡಿಕೊಂಡಿದ್ದಾರೆ. ತ್ರಿಕೋನ ಪ್ರೇಮಕಥೆಯೊಂದು ಎರಡು ಮದುವೆ ಹಾಗೂ ಇಬ್ಬರ ಬಲಿಯೊಂದಿಗೆ ಅಂತ್ಯವಾಗಿದೆ.
ಬೆಂಗಳೂರು (ಡಿ.18): ಪರಮಾತ್ಮ ಸಿನಿಮಾದಲ್ಲಿ ಯೋಗರಾಜ್ ಭಟ್ ಅವರು ಬರೆದ ಕತ್ಲಲ್ಲಿ ಕರಡಿಗೆ ಹಾಡಿನಲ್ಲಿ ಬರುವ ಒಂದು ಸಾಲು,'ಬೆನ್ನಲ್ಲಿ ಹುಣ್ ಅಂತೆ ಆ ಫಸ್ಟ್ ಲವ್ವು, ಯಾಮಾರಿ ಅಂಗಾತ ಮಲ್ಕೊಂಡ್ರೆ ನೋವು, ಎಲ್ಲಾನು ಮರೆಯೋಕೆ ಹೋಗ್ಬಾರ್ದು ರೀ, ಕೆರೆಯೋಕೆ ಹುಣ್ ಒಂದು ಇರಬೇಕು ರೀ..' ಅಂತಾ. ಇದೇ ರೀತಿ ಮೊದಲ ಪ್ರೀತಿಯ ಹುಣ್ಣನ್ನು ಕೆರೆದುಕೊಳ್ಳಲು ಹೋಗಿ ವಿವಾಹಿತ ಪ್ರೇಮಿಗಳು ಬಾರದ ಲೋಕಕ್ಕೆ ಹೋಗಿಬಿಟ್ಟಿದ್ದಾರೆ. ತ್ರಿಕೋನ ಪ್ರೇಮಕಥೆಯೊಂದು ಎರಡು ಮದುವೆ ಹಾಗೂ ಇಬ್ಬರ ಬಲಿಯೊಂದಿಗೆ ಅಂತ್ಯವಾಗಿದೆ. ಮಂಡ್ಯದ ಮದ್ದರೂಇನಲ್ಲಿ ವಿವಾಹಿತ ಪ್ರೇಮಿಗಳ ಡೆತ್ ಕಹಾನಿ ಜಿಲ್ಲೆಯಲ್ಲಿ ಚರ್ಚೆ ಹುಟ್ಟುಹಾಕಿದೆ ಮದುವೆಯಾಗಿದ್ರು ಹಳೇ ಪ್ರೇಮಿಗಾಗಿ ಸೂಸೈಡ್ ಮಾಡಿಕೊಂಡಿದ್ದಾರೆ.
ಮದುವೆಯಾಗಿದ್ರೂ ಹಳೇ ಲವರ್ ನೆನಪಿನಲ್ಲಿ ಗೃಹಿಣಿ ನದಿಗೆ ಹಾರಿ ಸೂಸೈಡ್ ಮಾಡಿಕೊಂಡಿದ್ದಾರೆ. ಯರಗನಹಳ್ಳಿ ಗ್ರಾಮದ ಗೃಹಿಣಿ 20 ವರ್ಷದ ಸೃಷ್ಟಿ ಆತ್ಮಹತ್ಯೆ ಮಾಡಿಕೊಂಡ ವಿವಾಹಿತೆ. ಇನ್ನು ಸೃಷ್ಟಿ ಸಾವಿನ ಸುದ್ದಿ ಕೇಳಿ ಬನ್ನಹಳ್ಳಿಯ 25 ವರ್ಷದ ಪ್ರಸನ್ನ ಕೂಡ ನೇಣಿಗೆ ಶರಣಾಗಿದ್ದಾನೆ.
ಬ್ಯಾಕೂ ಇಲ್ಲ, ಫ್ರಂಟೂ ಇಲ್ಲ.. ಆಪರೇಷನ್ ಮಾಡಿಸದೇ ಮಗನೊಂದಿಗೆ ಜಾಲಿಯಾಗಿ ಹೊರಬಂದ ಆರೋಪಿ ದರ್ಶನ್!
ಕೆಲವು ವರ್ಷಗಳಿಂದ ಸೃಷ್ಟಿ - ಪ್ರಸನ್ನ ಪ್ರೀತಿ ಮಾಡುತ್ತಿದ್ದರು. ಇದೇ ಹಂತದಲ್ಲಿ ಪ್ರಸನ್ನ, ಸೃಷ್ಟಿಯ ಸ್ನೇಹಿತೆ ಸ್ಪಂದನಾಳನ್ನು ಪ್ರೀತಿ ಮಾಡುತ್ತಿದ್ದ. ಸ್ಪಂದನ ಜತೆಯೇ ಪ್ರಸನ್ನ ಪ್ರೇಮ ವಿವಾಹ ಕೂಡ ಆಗಿದ್ದ. ಇನ್ನೊಂದೆಡೆ, ಒಂದೂವರೆ ವರ್ಷದ ಹಿಂದೆ ದಿನೇಶ್ ಎಂಬಾತನ ಜತೆ ಸೃಷ್ಟಿ ಮದುವೆಯಾಗಿದೆ. ಬೇರೆ ಬೇರೆ ಮದುವೆಯಾಗಿದ್ದರೂ ಪ್ರಸನ್ನ-ಸೃಷ್ಠಿ ಲವ್ವಿ ಡವ್ವಿ ನಿಂತಿರಲಿಲ್ಲ. ಗಂಡನ ಜತೆ ಜಗಳ ಮಾಡಿಕೊಂಡು ಡಿ. 11ರಂದು ಸೃಷ್ಟಿ ನಾಪತ್ತೆಯಾಗಿದ್ದಳು. ಡಿ.16ರಂದು ಶಿಂಷಾ ನದಿಯಲ್ಲಿ ಸೃಷ್ಟಿ ಶವ ಪತ್ತೆಯಾಗಿದೆ. ಸೃಷ್ಟಿ ಸಾವಿನ ವಿಚಾರ ಕೇಳಿ ಪ್ರಸನ್ನ ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ. ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೃಷ್ಠಿ ಹಾಗೂ ಸ್ಪಂದನ ಇಬ್ಬರೂ ಕ್ಲಾಸ್ ಮೇಟ್ ಆಗಿದ್ದರು. ಸ್ಪಂದನಾ ಜೊತೆ ಮದುವೆಯಾಗಿದ್ದರೂ, ಪ್ರಸನ್ನ, ಸೃಷ್ಟಿ ಜೊತೆ ತನ್ನ ಪ್ರೇಮ ಪುರಾಣ ಮುಂದುವರಿಸಿದ್ದ. ಈಗ ಇಬ್ಬರೂ ಬಾರದ ಲೋಕಕ್ಕೆ ಹೋಗಿದ್ದಾರೆ.
ಹೈಕೋರ್ಟ್‌ಗೆ ಸೂಪರ್‌ಹಿಟ್ 'ಸರ್ಜರಿ' ಫಿಲ್ಮ್ ತೋರಿಸಿದ್ದ ಆರೋಪಿ ದರ್ಶನ್ ಡಿಸ್ಚಾರ್ಜ್.!