ಮಂಡ್ಯ: ಸಿನಿಮಾ ದೃಶ್ಯವಲ್ಲ... ಮಚ್ ಹಿಡಿದು ಬಂದ ಮಾದೇಶ; ವಿಡಿಯೋ
ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ದೂರು/ ಹಾಡಹಗಲೇ ಲಾಂಗ್ ಹಿಡಿದು ಬಂದ/ ಮಂಡ್ಯ ಜಿಲ್ಲೆಯ ಘಟನೆ ಫುಲ್ ವೈರಲ್/ ಅಬಕಾರಿ ಅಧಿಕಾರಿಗಳು ಈ ಹಿಂದೆ ದಂಡ ವಿಧಿಸಿದ್ದರು
ಮಂಡ್ಯ(ಮಾ. 06) ಗ್ರಾಮದಲ್ಲಿ ಅಕ್ರಮವಾಗಿ ಮದ್ಯಮಾರಾಟ ನಡೆಸುವುದರ ಬಗ್ಗೆ ಮಾಹಿತಿ ನೀಡಿದ್ದರು ಎಂಬ ಕಾರಣಕ್ಕೆ ಹಾಡಹಗಲೇ ಲಾಂಗ್ ಹಿಡಿದು ಬೆದರಿಕೆ ಹಾಕಿರುವ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ಪಟ್ಟಣದ ಸಿದ್ದಾರ್ಥ ನಗರದ ಹೊಸ ಬಡಾವಣೆಯಲ್ಲಿ ನಡೆದಿದೆ.ಮಾದೇಶ ಎಂಬಾತನೇ ಲಾಂಗ್ ಹಿಡಿದು ಬೆದರಿಕೆ ಒಡ್ಡಿರುವಾತ.
ದಾಬೋಲ್ಕರ್ ಬಳಸಿದ್ದ ಪಿಸ್ತೂಲ್ ಸಮುದ್ರದಾಳದಲ್ಲಿ!
ಹಲವು ವರ್ಷಗಲಿಂದಲೂ ಈತ ಅಕ್ರಮವಾಗಿ ಮದ್ಯಮಾರಾಟ ನಡೆಸುತ್ತಿದ್ದ ಎನ್ನಲಾಗಿದ್ದು ಈ ಬಗೆಗೆ ಅಬಕಾರಿ ಇಲಾಖೆಯಅಧಿಕಾರಿಗಳು ಸಹ ದಂಡ ವಿಧಿಸಿದ್ದರಂತೆ. ಇತ್ತೀಚೆಗೆ ಈತ ತಾನು ಮದ್ಯಮಾರಾಟ ಮಾಡುವುದನ್ನ ಅಧಿಕಾರಿಗಳಿಗೆ ಮಾಹಿತಿ ನೀಡಿದ್ರು ಅನ್ನೋ ಕಾರಣಕ್ಕೆ ಲಾಂಗ್ ಹಿಡಿದು ಬೆದರಿಕೆ ಹಾಕಿದ್ದಾನೆ . ಈತನ ವರ್ತನೆಯನ್ನ ಖಂಡಿಸಿರುವ ಸ್ಥಳೀಯರು ಈತನ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ ಮಳವಳ್ಳಿ ಪಟ್ಟಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.