ಸ್ನೇಹಿತನ ಹೆಂಡತಿ ಮೇಲೆಯೇ ಕಣ್ಣು ಹಾಕಿದ ಪಾಪಿ: ಪ್ರಶ್ನಿಸಿದ್ದಕ್ಕೆ ಕೊಂದೇ ಬಿಟ್ಟ..!

ಇಂಥವರಿಂದಲೇ ಸ್ನೇಹ ಅನ್ನೋ ಪವಿತ್ರ ಸಂಬಂಧವನ್ನ ಅನುಮಾನದಿಂದ ನೋಡುವಂತಾಗಿದೆ. 

First Published Nov 6, 2022, 1:49 PM IST | Last Updated Nov 6, 2022, 1:49 PM IST

ಬೆಳಗಾವಿ(ನ.06): ಅವರಿಬ್ಬರೂ ಒಂದೇ ಕಾಲೋನಿಯಾದ್ರೂ ಅಕ್ಕಪಕ್ಕದ ಓಣಿಯಲ್ಲಿ ವಾಸವಿದ್ದರು. ಒಬ್ಬರ ಮನೆಗೆ ಒಬ್ಬರು ಹೋಗೊದನ್ನೂ ಸಹ ಮಾಡ್ತಿದ್ರು. ಒಂದೇ ಮಾತಿನಲ್ಲಿ ಹೇಳಬೇಕಂದ್ರೆ ಅವರು ಕುಚುಕು ಗೆಳೆಯರು. ಆದ್ರೆ ಸ್ನೇಹಿತನಿಗೆ ಸಲುಗೆ ಕೊಟ್ಟಿದ್ದೇ ಅಲ್ಲಿ ತಪ್ಪಾಗಿ ಹೋಗಿತ್ತು. ಸ್ನೇಹಿತ ಅಂತ ಮನೆಯೊಳಗೆ ಬಿಟ್ಟಕೊಂಡ್ರೆ ಆತ ಮಾಡಿದ್ದು ಮನೆಹಾಳ್ ಕೆಲಸ. ಆತ ಸ್ನೇಹಿತನ ಪತ್ನಿ ಮೆಲೇ ಕಣ್ಣಾಕಿಬಿಟ್ಟಿದ್ದ. ಈ ವಿಷ್ಯ ಗೊತ್ತಾಗಿ ಯಾಕಪ್ಪ ಹೀಗೆ ಮಾಡಿದೆ ಅಂದ್ರೆ ಅವನನ್ನೇ ಕೊಂದು ಮುಗಿಸಿಬಿಟ್ಟಿದ್ದ. ಹೀಗೆ ಪತ್ನಿ ಮೇಲೆ ಕಣ್ಣು ಹಾಕಿದ್ದ ಸ್ನೇಹಿತನನ್ನ ಪ್ರಶ್ನೆ ಮಾಡಿದ್ದಕ್ಕೇ ಹೆಣವಾದ ಸ್ನೇಹಿತನ ಕಥೆಯೇ ಇವತ್ತಿನ ಎಫ್ಐಆರ್.

ಪ್ರಶಾಂತ್ ಎರಡು ತಿಂಗಳ ಹಿಂದಷ್ಟೇ ಮದುವೆ ಕೂಡ ಆಗಿದ್ದ. ಇತ್ತಿಚೀನ ದಿನಗಳಲ್ಲಿ ಅದೊಂದು ವಿಚಾರಕ್ಕೆ ಪ್ರಶಾಂತ್ ಮತ್ತು ಮಾರುತಿ ನಡುವಿನ ಸ್ನೇಹ ಹದಗೆಟ್ಟಿದ್ದರಿಂದ ಒಬ್ಬರನ್ನೊಬ್ಬರು ನೋಡಿಕೊಳ್ತೆವಿ ಅನ್ನೋ ಮಟ್ಟಿಗೆ ಮಾತನಾಡಿಕೊಂಡು ಓಡಾಡುತ್ತಿದ್ದರು. ಹೀಗಿದ್ದಾಗಲೇ ಅ.30ರಂದು ರಾತ್ರಿ ಅದೇ ವಿಚಾರಕ್ಕೆ ಇಬ್ಬರ ಮಧ್ಯೆ ಗಲಾಟೆಯಾಗಿ ಪ್ರಶಾಂತ್ ತನ್ನ ಗೆಳೆಯ ಮಾರುತಿಯನ್ನ ಹತ್ಯೆ ಮಾಡಿ ಬಿಡ್ತಾನೆ.

ಜೊತೆಯಲ್ಲಿ ಕೆಲಸ ಮಾಡುತ್ತಿದ್ದವನನ್ನೇ ಕೊಂದ್ರು: ರೈಲ್ವೆ ಹಳಿ ಮೇಲೆ ಶವ ಎಸೆಯಲು ಬಂದು ತಗ್ಲಾಕೊಂಡ್ರು!

ಯಾವಾಗ ಪ್ರಶಾಂತನ ಹೆಂಡತಿಗೆ ತಾನು ಮಾಡಿದ್ದು ನೀಚ ಕೆಲಸದ ಬಗ್ಗೆ ಗೊತ್ತಾಯ್ತೋ ಆತನಿಗೆ ಮನೆಯಲ್ಲಿ ಬೆಲೆಯೇ ಇಲ್ಲದಂತಾಗಿಬಿಡುತ್ತೆ. ಬೀದಿಯಲ್ಲೂ ಮರ್ಯಾದೆ ಇಲ್ಲ. ಮನೆಯಲ್ಲೂ ಇದ್ದ ಮರ್ಯಾದೆ ಹೊಯ್ತು. ಇದಕ್ಕೆಲ್ಲಾ ಕಾರಣನಾದ ತನ್ನ ಸ್ನೇಹಿತನನ್ನ ಮುಗಿಸಲೇ ಬೇಕು ಎಂದು ನಿರ್ಧರಿಸಿದ ಪ್ರಶಾಂತ ಮನೆಯಿಂದ ಒಂದು ಕೊಡಲಿ ತೆಗೆದುಕೊಂಡು ಮಾರುತಿ ಇದ್ದ ಕಡೆ ನುಗ್ಗೇ ಬಿಟ್ಟ.

ಇದನ್ನೆಲ್ಲಾ ನೋಡ್ತಿದ್ರೆ ಸ್ನೇಹಿತರನ್ನ ಮನೆಗೆ ಕರೆದುಕೊಂಡು ಹೋಗೋದಾದ್ರೂ ಹೇಗೆ..? ಇಂಥವರಿಂದಲೇ ಸ್ನೇಹ ಅನ್ನೋ ಪವಿತ್ರ ಸಂಬಂಧವನ್ನ ಅನುಮಾನದಿಂದ ನೋಡುವಂತಾಗಿರೋದು. ಸದ್ಯ ಮಾರುತಿ ಪತ್ನಿ, ಎರಡು ಮಕ್ಕಳು ಅನಾಥವಾಗಿದ್ರೇ ಪಾಪಿ ಪ್ರಶಾಂತ್ ಎರಡು ತಿಂಗಳ ಹಿಂದೆ ಮದುವೆಯಾಗಿದ್ದು ಆತನ ಹೆಂಡತಿ ಕೂಡ ಇದೀಗ ದಿಕ್ಕಿಲ್ಲದಂತಾಗಿದ್ದಾಳೆ. 
 

Video Top Stories