ಕದ್ದನೆಂದು ಕೊಂದು ಹಂತಕರೇ ಹುಡುಕೋ ನಾಟಕವಾಡಿದ್ರು, ಫೋನ್‌ನಲ್ಲಿತ್ತು ಕೊಲೆಯ ಲೈವ್ ವಿಡಿಯೋ!

ನಾಪತ್ತೆಯಾಗಿಬಿಟ್ಟ. ತಾಯಿ ಎಷ್ಟೇ ಹುಡುಕಿದ್ರೂ ಸಿಗೋದೇ ಇಲ್ಲ.. ಆದ್ರೆ ವಾರವೆಲ್ಲಾ ಹುಡುಕಿ ಕೊನೆಗೆ ಪೊಲೀಸ್ ಠಾಣೆಗೆ ಹೋದ್ರೆ ಪೊಲೀಸರು ಆಕೆಯ ಮಗನ ಶವವನ್ನ ಅದಾಗಲೇ ದಫಾನ್ ಮಾಡಿಬಿಟ್ಟಿದ್ರು!

Share this Video
  • FB
  • Linkdin
  • Whatsapp

ಇತ್ತೀಚೆಗೆ ಕಳ್ಳತನ ಶಂಕೆ ಮೇರೆಗೆ ಕೂಲಿ ಕಾರ್ಮಿಕನೊಬ್ಬನನ್ನು ಅಕ್ರಮವಾಗಿ ಬಂಧಿಸಿಟ್ಟು ದೌರ್ಜನ್ಯ ನಡೆಸಿ ಹತ್ಯೆಗೈದು ಬಳಿಕ ಮೃತದೇಹವನ್ನು ಚರಂಡಿಯಲ್ಲಿ ಎಸೆದಿದ್ದ ಗುಜರಿ ಅಂಗಡಿ ಮಾಲಿಕ ಸೇರಿದಂತೆ ಮೂವರನ್ನು ರಾಮಮೂರ್ತಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ದೇವರಜೀವನಹಳ್ಳಿ ನಿವಾಸಿ ಸೈಫುಲ್ಲಾ (35) ಎಂಬಾತ ಮೃತ ವ್ಯಕ್ತಿ. ತನ್ನ ಪತ್ನಿ ಹಾಗೂ ಮಕ್ಕಳಿಂದ ಪ್ರತ್ಯೇಕನಾಗಿದ್ದ ಮೃತ ಸೈಫುಲ್ಲಾ, ಕೂಲಿ ಕೆಲಸ ಮಾಡಿಕೊಂಡು ದೇವರಜೀವನಹಳ್ಳಿಯಲ್ಲಿ ನೆಲೆಸಿದ್ದ.

Bengaluru: ಕಳ್ಳನೆಂದು 1 ವಾರ ಕೋಣೆಯಲ್ಲಿ ಕೂಡಿಟ್ಟು ಹಿಂಸಿಸಿದ್ರು, ಸತ್ತ ಬಳಿಕ ಹೆಣವನ್ನು

ಕದ್ದ ಆರೋಪದ ಮೇಲೆ ಗುಜರಿ ಅಂಗಡಿಯಲ್ಲಿ ಸೈಫುಲ್ಲಾನನ್ನು ಕೂಡಿ ಹಾಕಿ ಒಂದು ವಾರವೀಡಿ ಅನ್ನಹಾರ ನೀಡದೆ ಆತನ ಮೇಲೆ ಮನ ಬಂದಂತೆ ಹೊಡೆದಿದ್ದಾರೆ. ಈ ಪೈಶಾಚಿಕ ದೌರ್ಜನ್ಯವನ್ನು ಆರೋಪಿಗಳು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದರು ಮಾ.1ರಂದು ಚಿತ್ರಹಿಂಸೆ ತೀವ್ರವಾಗಿ ನಿತ್ರಾಣಗೊಂಡಿದ್ದ ಸೈಫುಲ್ಲಾ ಮೃತಪಟ್ಟಿದ್ದಾನೆ. ಈ ಸಾವಿನಿಂದ ಆತಂಕಗೊಂಡ ಆರೋಪಿಗಳು, ಮಾ.3ರಂದು ರಾತ್ರಿ ಮೃತದೇಹವನ್ನು ಆಟೋದಲ್ಲಿ ತೆಗೆದುಕೊಂಡು ಹೋಗಿ ಕಸ್ತೂರಿ ನಗರದ ಸಾದಹಳ್ಳಿ ರಸ್ತೆಯ ಚರಂಡಿಗೆ ಎಸೆದು ಮರಳಿದ್ದರು. 

Related Video