ಉಡುಪಿ: ಮದುವೆಯಾದ 2 ದಿನಕ್ಕೆ ಸಾವಿಗೆ ಶರಣಾದ ಜೋಡಿ, ಕೇಸ್‌ಗೆ ಟ್ವಿಸ್ಟ್

ಕಾರಿನೊಳಗೆ ಪೆಟ್ರೋಲ್ ಸುರಿದುಕೊಂಡು ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂದಾರ್ತಿ ಸಮೀಪದ ಹೆಗ್ಗುಂಜೆಯಲ್ಲಿ ನಡೆದಿದೆ. ಕಳೆದ ಮೂರು ದಿನಗಳಿಂದ ಬೆಂಗಳೂರಿನ ಹೆಬ್ಬಾಳದ ಯಶವಂತ್ ಮತ್ತು ಜ್ಯೋತಿ ಎಂಬುವವರು ನಾಪತ್ತೆಯಾಗಿದ್ದರು. 

Share this Video
  • FB
  • Linkdin
  • Whatsapp

ಉಡುಪಿ (ಮೇ. 22): ಕಾರಿನೊಳಗೆ ಪೆಟ್ರೋಲ್ ಸುರಿದುಕೊಂಡು ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂದಾರ್ತಿ ಸಮೀಪದ ಹೆಗ್ಗುಂಜೆಯಲ್ಲಿ ನಡೆದಿದೆ. ಕಳೆದ ಮೂರು ದಿನಗಳಿಂದ ಬೆಂಗಳೂರಿನ ಹೆಬ್ಬಾಳದ ಯಶವಂತ್ ಮತ್ತು ಜ್ಯೋತಿ ಎಂಬುವವರು ನಾಪತ್ತೆಯಾಗಿದ್ದರು. ಕೆಲವು ವರ್ಷಗಳಿಂದ ಇಬ್ಬರೂ ಪ್ರೀತಿಸುತ್ತಿದ್ದರು. ಇವರ ಪ್ರೀತಿಯನ್ನೂ ಎರಡೂ ಮನೆಯವರು ಒಪ್ಪಿರಲಿಲ್ಲ. ಮನವೊಲಿಸಲು ಸಾಕಷ್ಟು ಪ್ರಯತ್ನಿಸಿದಾಗಲೂ ಒಪ್ಪದಿದ್ದಾಗ ಓಡಿ ಹೋಗಿ ಮದುವೆಯಾಗುತ್ತಾರೆ. ಮದುವೆಯಾದ ಮೇಲೆಯೂ ಪೋಷಕರು ಒಪ್ಪದಿದ್ದಾಗ, ಬಾಡಿಗೆ ಕಾರು ಪಡೆದು ಉಡುಪಿಗೆ ಹೋಗಿ ಅಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ.

'ಆತ್ಮಹತ್ಯೆಗೂ ಮುನ್ನ ಪೋಷಕರಿಗೆ ಮೆಸೇಜ್ ಮಾಡುತ್ತಾರೆ. 'ನಮಗೆ ಪ್ರೀತಿಯೂ ಮುಖ್ಯ, ನೀವೂ ಮುಖ್ಯ. ನಾವೊಂದು ತಪ್ಪು ನಿರ್ಧಾರ ತೆಗೆದುಕೊಂಡಿದ್ದೇವೆ. ಹೀಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ' ಎಂದು ಮೆಸೇಜ್ ಕಳುಹಿಸುತ್ತಾರೆ. ಸ್ಥಳಕ್ಕೆ ಬ್ರಹ್ಮಾವರ ಪೊಲೀಸರು ಭೇಟಿ ನೀಡಿ ಮಹಜರು ನಡೆಸಿದ್ದಾರೆ. 

Related Video