'ಒಮ್ಮೆ ಶರಣಾದ್ರೆ ಪ್ರೀತಿಗೆ, ಕತ್ತು ಕೊಟ್ಟಂಗೆ ಕತ್ತಿಗೆ..' ಮೂರೇ ತಿಂಗಳ ಪ್ರೀತಿಗೆ ನೂರ್ಕಾಲದ ಬದುಕು ಕಳೆದುಕೊಂಡ್ರು!

ಇದೊಂದು ಪಾಗಲ್‌ ಪ್ರೇಮಿಯ ಕಥೆ. ಬರೀ ಮೂರೇ ತಿಂಗಳ ಪ್ರೀತಿಗೆ ನೂರ್ಕಾಲ ಸುಂದರವಾಗಿ ಬದುಕುವ ಅವಕಾಶವನ್ನೇ ಕಳೆದುಕೊಂಡ ವ್ಯಥೆ. ಜಾತ್ರೆಗೆ ಹೋಗುವ ತಯಾರಿಯಲ್ಲಿದ್ದ ಹುಡುಗಿ ಕೊಲೆಯಾಗಿ ಹೋಗಿದ್ದಳು, ಅವಳ ಪಕ್ಕದಲ್ಲೇ ಬಾಯ್‌ಫ್ರೆಂಡ್‌ ಶವ ಕೂಡ ಸಿಕ್ಕಿತ್ತು.
 

Share this Video
  • FB
  • Linkdin
  • Whatsapp

ಕೊಪ್ಪಳ (ಜ.17): ಅವರಿನ್ನೂ ಸಾಮಾನ್ಯ ಲೋಕವನ್ನೇ ನೋಡಿರದವರು. ಆದರೆ, ಪ್ರೇಮಲೋಕದಲ್ಲಿ ವಿಹರಿಸುವ ಕನಸು ಕಂಡವರು. ಶಾಲೆ ಬಿಟ್ಟು ಕಾಲೇಜು ಮೆಟ್ಟಿಲು ಹತ್ತುತ್ತಿದ್ದಂತೆ ಅವರಿಬ್ಬರು ಪ್ರೇಮದ ಪಾಶಕ್ಕೆ ತಗುಲುಹಾಕಿಕೊಂಡಿದ್ದರು. ಆದರೆ, ಇವರ ಪ್ರೇಮದ ಆಯಸ್ಸು ಇದ್ದಿದ್ದು ಕೇವಲ 3 ತಿಂಗಳು ಮಾತ್ರ. 

ಲವ್‌ಅಲ್ಲಿ ಬಿದ್ದ ಮೂರೇ ತಿಂಗಳಿಗೆ ಅವರಿಬ್ಬರು ಹೆಣವಾಗಿ ಹೋಗಿದ್ದರು. ಪ್ರೇಯಸಿಯ ಮನೆಯಲ್ಲಿ ಇಬ್ಬರು ರಕ್ತದ ಮಡುವಿನಲ್ಲಿ ಬಿದ್ದು ಸಾವು ಕಂಡಿದ್ದರು. ಮೇಲ್ನೋಟಕ್ಕೆ ಅದು ಕೊಲೆಯಂತೆ ಕಂಡಿದ್ದರಿಂದ ಪೊಲೀಸರ ಎಂಟ್ರಿ ಕೂಡ ಆಗಿತ್ತು. ಅವರಿಬ್ಬರನ್ನ ಅಲ್ಲಿ ಯಾರೋ ಕೊಲೆ ಮಾಡಿದ್ದಾರೆ ಅಂತ ಎಲ್ಲರೂ ಅಂದುಕೊಂಡಿದ್ದರು. ತನಿಖೆಗಿಳಿದಿದ್ದ ಪೊಲೀಸರು ಕೇಸ್‌ಗೆ ಬೇರೆಯದ್ದೇ ಟ್ವಿಸ್ಟ್ ಕೊಟ್ಟಿದ್ದರು. ಮಕರ ಸಂಕ್ರಮಣದ ದಿನ ಒಂದೇ ಮನೆಯಲ್ಲಿ ಸಿಕ್ಕ ಜೋಡಿ ಮೃತದೇಹಗಳ ಕೇಸ್‌ ಬಹಳ ಕುತೂಹಲಕಾರಿ.

Koppala: ಪ್ರೀತಿ ನೀರಾಕರಿಸಿದ ಮನೆಯವರು, ಕತ್ತು ಕೊಯ್ದುಕೊಂಡು ಪ್ರೇಮಿಗಳ ಆತ್ಮಹತ್ಯೆ

ಪಾಗಲ್‌ ಪ್ರೇಮಿ ಪ್ರಕಾಶ್‌ ಭಜಂತ್ರಿ, ಗೆಳತಿಯ ಮನೆಗೆ ಹೊಕ್ಕು ಆಕೆಯನ್ನು ಕೊಲೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದ. ಒಂದೇ ಏರಿಯಾದಲ್ಲಿ ಎದುರು-ಬದುರು ಮನೆಯವರು. ಕೆಲವು ಒನ್‌ ಸೈಡ್‌ ಲವ್‌ ಅಂದ್ರೆ ಇನ್ನೂ ಕೆಲವರು ಇಬ್ಬರೂ ಪ್ರೀತಿ ಮಾಡುತ್ತಿದ್ದರು ಎಂದಿದ್ದಾರೆ. ಆದರೆ, ಇನ್ನೂ ಬಾಳಿ ಬದುಕಬೇಕಿದ್ದ ಜೀವಗಳಾಗಿತ್ತು. ಪ್ರಕಾಶ ಅವಳು ಸಿಗೋದಿಲ್ಲ ಅನ್ನೋ ಕಾರಣಕ್ಕೆ ಅವಳನ್ನ ಮುಗಿಸಿ ತಾನೂ ಚಾಕು ಹಾಕಿಕೊಂಡು ಸಾವು ಕಂಡಿದ್ದಾರೆ.

Related Video