ನೇಪಾಳದಿಂದ ಬೆಂಗಳೂರಿಗೆ ಬಂದಿದ್ದ ಜೋಡಿಹಕ್ಕಿ; ಹೊಸ ಪ್ರಿಯಕರನ ಜೊತೆಗೆ ಪರಾರಿಯಾದ ಯುವತಿ

ಲೋಕೇಶ್ ಹಾಗೂ ಸಂಧ್ಯಾ ಹಲವು ವರ್ಷಗಳಿಂದ ಪ್ರೀತಿ ಮಾಡ್ತಿದ್ರು. ಆದ್ರೆ ಈ ಜೋಡಿ ಮಧ್ಯೆ ಎಂಟ್ರಿಯಾಗಿದ್ದು ಮತ್ತೊಬ್ಬ ನೇಪಾಳಿ ಯುವಕ ಬಿಕಾಸ್ ಕುಮಾರ್. ಸಂಧ್ಯಾಳಿಗೆ ಬಿಕಾಸ್​ ಕುಮಾರ್​ ಅದ್ಯಾವ ಮಂಕು ಬೂದಿ ಎರಚಿದನೋ ಗೊತ್ತಿಲ್ಲ. ಸಂಧ್ಯಾ, ಮೊದಲ ಪ್ರಿಯಕರ ಲೋಕೇಶ್ ಕೊಡಿಸಿದ್ದ ಮೊಬೈಲ್ ,ಗಾಡಿ ಹಾಗೂ ಮನೆಯಲ್ಲಿದ್ದ ಚಿನ್ನಾಭರಣ ತೆಗೆದುಕೊಂಡು ಹೊಸ ಪ್ರೇಮಿ ಬಿಕಾಸ್ ಕುಮಾರ್ ಹಿಂದೆ ಹೋಗಿದ್ದಾಳೆ. 

Share this Video
  • FB
  • Linkdin
  • Whatsapp

ಬೆಂಗಳೂರು(ಜ.28): ಈ ಫೊಟೋದಲ್ಲಿರೋ ಜೋಡಿ ಹೆಸರು ಲೋಕೇಶ್ ಹಾಗೂ ಸಂಧ್ಯಾ. ಇಬ್ಬರೂ ಮೂಲತಃ ನೇಪಾಳದವರು. ನಾಲ್ಕು ವರ್ಷಗಳ ಹಿಂದೆ ಬಿಟಿಎಂ ಲೇಔಟ್​ನಲ್ಲಿ ಬಂದು ನೆಲೆಸಿದ್ದ ಲೋಕೇಶ್​, ಆಕೆಗಾಗಿ ಮನೆಯನ್ನು ಮಾಡಿ ಅವರ ಪೋಷಕರನ್ನು ಕರೆಸಿದ್ದ. ಅವಳಿಗಾಗಿ ಒಂದು ಗಾಡಿಯನ್ನು ಖರೀದಿ ಮಾಡಿಕೊಟ್ಟಿದ್ದ. ಹೀಗೆ ತನ್ನೆಲ್ಲ ಪ್ರೀತಿಯನ್ನ ಧಾರೆ ಎರೆದವನಿಗೆ ಪ್ರತಿಯಾಗಿ ಈ ಚಾಲಾಕಿಯಿಂದ ಸಿಕ್ಕಿದ್ದು ದ್ರೋಹ. 

ಲೋಕೇಶ್ ಹಾಗೂ ಸಂಧ್ಯಾ ಹಲವು ವರ್ಷಗಳಿಂದ ಪ್ರೀತಿ ಮಾಡ್ತಿದ್ರು. ಆದ್ರೆ ಈ ಜೋಡಿ ಮಧ್ಯೆ ಎಂಟ್ರಿಯಾಗಿದ್ದು ಮತ್ತೊಬ್ಬ ನೇಪಾಳಿ ಯುವಕ ಬಿಕಾಸ್ ಕುಮಾರ್. ಸಂಧ್ಯಾಳಿಗೆ ಬಿಕಾಸ್​ ಕುಮಾರ್​ ಅದ್ಯಾವ ಮಂಕು ಬೂದಿ ಎರಚಿದನೋ ಗೊತ್ತಿಲ್ಲ. ಸಂಧ್ಯಾ, ಮೊದಲ ಪ್ರಿಯಕರ ಲೋಕೇಶ್ ಕೊಡಿಸಿದ್ದ ಮೊಬೈಲ್ ,ಗಾಡಿ ಹಾಗೂ ಮನೆಯಲ್ಲಿದ್ದ ಚಿನ್ನಾಭರಣ ತೆಗೆದುಕೊಂಡು ಹೊಸ ಪ್ರೇಮಿ ಬಿಕಾಸ್ ಕುಮಾರ್ ಹಿಂದೆ ಹೋಗಿದ್ದಾಳೆ. ನನ್ನ ವಸ್ತುಗಳನ್ನು ವಾಪಸ್​​ ಕೋಡು ಎಂದು ಲೋಕೇಶ್​ ಕೇಳಿದ್ದಕ್ಕೆ, 14ನೇ ತಾರೀಕು ಜಕ್ಕೂರು ಬಳಿ ಬಾ ಅಂತಾ ಸಂಧ್ಯಾ ಕರೆಸಿಕೊಂಡಿದ್ದಾಳೆ. ಈ ವೇಳೆ ಬಿಕಾಸ್​ ಕುಮಾರ್​ ಹಾಗೂ ಆತನ ಸಹಚರರು ಚಾಕು, ಸ್ಕ್ರೂಡ್ರೈವರ್​‌ನಿಂದ ಲೋಕೇಶ್​ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದರು. 

ಸದ್ಯ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡ ಪೊಲೀಸರು ಆರೋಪಿ ಬಿಕಾಸ್ ಕುಮಾರ್ ಮತ್ತು ಆತನ ಸ್ನೇಹಿತ ನನ್ನ ಅರೆಸ್ಟ್ ಮಾಡಿ ಜೈಲಿಗೆ ಕಳುಹಿಸಿದ್ದಾರೆ.

Related Video