
ಪಿಜಿಯಲ್ಲಿ ಪ್ರೇಯಸಿ ಜೊತೆ ಕುಚ್-ಕುಚ್! ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಗಂಡ ಕೊಟ್ಟ ಕಾರಣವೇ ಬೇರೆ!
ಆಫೀಸ್‌ನಲ್ಲಿ ಪ್ರೀತಿಸಿ, ಪೋಷಕರ ವಿರೋಧದ ನಡುವೆ ಮದುವೆಯಾದ ಜೇಕಬ್, ತನ್ನ ಪತ್ನಿಗೆ ಮೋಸ ಮಾಡಿ ಮತ್ತೊಬ್ಬಳ ಜೊತೆ ಸಂಬಂಧ ಹೊಂದಿದ್ದ. ಕೊನೆಗೆ, ತನ್ನ ಪತ್ನಿಯ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.
ಆಫೀಸ್‌ನಲ್ಲಿ ಶುರುವಾಗಿದ್ದ ಅವರಿಬ್ಬರ ಸ್ನೇಹ, ಕ್ರಮೇಣ ಸಲುಗೆಯಾಯ್ತು. ಸಲುಗೆ ಪ್ರೀತಿಯಾಯ್ತು. ಪ್ರೀತಿ ಮದುವೆ ಹಂತಕ್ಕೆ ಬಂತು. ಪೋಷಕರ ವಿರೋಧದ ನಡುವೆಯೂ ಪ್ರೇಮಿಗಳಿಬ್ಬರೂ ಲವ್ ಮ್ಯಾರೇಜ್ ಆದ್ರು. ಆದ್ರೆ, ಬೆಟ್ಟದಷ್ಟು ಕನಸುಗಳನ್ನ ಹೊತ್ತು, ಮನ ಮೆಚ್ಚಿದವನ ಜೊತೆ ಸಪ್ತಪದಿ ತುಳಿದಿದ್ದ ಆಕೆಗೆ ತಾನು ಮೋಸಹೋಗಿದ್ದೀನಿ ಅಂತ ಗೊತ್ತಾಗಿತ್ತು. ಯೆಸ್. ಗಂಡ ಅನ್ನೋ ಜಗಮೊಂಡ, ಮತ್ತೊಬ್ಬಳ ಜೊತೆ ಹೆಂಡತಿ ಕೈನಲ್ಲೇ ಸಿಕ್ಕಿಬಿದಿದ್ದ. ಅಷ್ಟಕ್ಕೂ ಯಾರು ಆ ಭಂಡ ಗಂಡ. ಏನವನ ಕಥೆ. ಹೆಂಡತಿ ಮನೆಯಲ್ಲಿದ್ದರೂ ಮತ್ತೊಬ್ಬಳ ಜೊತೆ ಲವ್ವಿಡವ್ವಿ ಶುರುವಿಟ್ಟುಕೊಂಡು ಕೊನೆಗೆ ಹೆಂಡತಿ ಕೈನಲ್ಲೇ ತಗ್ಲಾಕಿಕೊಂಡ ಭಂಡ ಗಂಡನ ಕಥೆಯೇ ಇವತ್ತಿನ ಎಫ್.ಐ.ಆರ್.
ಇತ್ತೀಚೆಗೆ ವಿವಾಹೇತರ ಸಂಬಂಧಗಳು ಹೆಚ್ಚು ಬೆಳಕಿಗೆ ಬರುತ್ತಿವೆ. ವಾರಕ್ಕೆ ಒಂದಾದರೂ ಇಂತಹ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ. ಇದಕ್ಕೆ ಹೊಸದೊಂದು ಸೇರ್ಪಡೆಯಾಗಿದೆ. ಆಂಧ್ರ ಪ್ರದೇಶ ಮೂಲದ ಜೇಕಬ್ ಇದೀಗ ವಿವಾಹೇತರ ಅಕ್ರಮ ಸಂಬಂಧದ ವಿಚಾರವಾಗಿ ಪತ್ನಿಯ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.
ಪ್ರೀತಿ ಮದುವೆಯಾಗಿ ನಂತರ ಆಕೆಯ ಕೈಗೆ ಮಗು ಕೊಡೋವರೆಗೂ ಈ ಪಾಪಿಗೆ ಆಕೆಯ ಜಾತಿಯ ನೆನಪಾಗಲಿಲ್ಲ. ಆದ್ರೆ ಮತ್ತೊಬ್ಬಳು ಸಿಗ್ತಿದ್ದಂತೆ ಆಕೆಯ ಜಾತಿ ಇವನಿಗೆ ಬೇಡವಾಗಿದ್ಯಂತೆ. ಇದೆಲ್ಲಾ ಒಂದು ನೆಪ ಅಷ್ಟೇ.