ಕೆ.ಆರ್.ಪುರ ತಹಶೀಲ್ದಾರ್ ಮನೆ ಮೇಲೆ ಲೋಕಾಯುಕ್ತ ದಾಳಿ: ಲಕ್ಷ..ಲಕ್ಷ ನಗದು ಸಹಿತ ಚಿನ್ನಾಭರಣ ಪತ್ತೆ

ಲೋಕಾಯುಕ್ತ ಅಧಿಕಾರಿಗಳು 2 ವಾಹನಗಳಲ್ಲಿ ಬಂದಿದ್ದು, ಅಜಿತ್ ರೈಗೆ ಸಂಬಂಧಿಸಿದ 11 ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ.
 

Share this Video
  • FB
  • Linkdin
  • Whatsapp

ಬೆಂಗಳೂರು: ತಹಶೀಲ್ದಾರ್‌ ಅಜಿತ್‌ ರೈ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಇನ್ನೂ ಶೋಧ ಕಾರ್ಯವನ್ನು ಮುಂದುವರೆಸಿದ್ದಾರೆ. ಅಜಿತ್‌ ರೈಗೆ ಸಂಬಂಧಿಸಿದ 11 ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ. ಸಂಬಂಧಿಕರು, ಸ್ನೇಹಿತರ ಹೆಸರಿನಲ್ಲಿ ಆಸ್ತಿ ಮಾಡಿರುವುದು ಬೆಳಕಿಗೆ ಬಂದಿದೆ. ಅಲ್ಲದೇ ಬೇನಾಮಿ ಆಸ್ತಿ ದಾಖಲೆಗಳು ಸಹ ಅವರ ಮನೆಯಲ್ಲಿ ಪತ್ತೆಯಾಗಿವೆ. ಆದಾಯಕ್ಕೂ ಹಾಗೂ ದೊರೆತ ಆಸ್ತಿಗೂ ತುಂಬಾ ವ್ಯತ್ಯಾಸ ಕಂಡುಬಂದಿದೆ.ಬುಧವಾರ ಬೆಳಗ್ಗೆಯೇ ದಾಳಿ ನಡೆಸಿದ್ದ ಅಧಿಕಾರಿಗಳು, ರಾತ್ರಿ ಪೂರ್ತಿ ಸಹಕಾರ ನಗರದ ನಿವಾಸದಲ್ಲೇ ಮೊಕ್ಕಾಂ ಹೂಡಿದ್ದರು. ದೊಡ್ಡಬಳ್ಳಾಪುರದ ಬಳಿ 98 ಎಕರೆ ಹೊಂದಿರುವ ಭೂಮಿ ಪತ್ರ ಲಭ್ಯವಾಗಿದೆ. ಈ ಆಸ್ತಿಯ ಮೌಲ್ಯ 300 ಕೋಟಿ ರೂ. ಎನ್ನಲಾಗಿದೆ.

ಇದನ್ನೂ ವೀಕ್ಷಿಸಿ: ಹುಡುಗ ಪಿಯುಸಿ ಫೇಲ್.. ಡಿಗ್ರಿ ಹುಡುಗಿ: ಪ್ರೀತಿ ಮಾಡಿದ ತಪ್ಪಿಗೆ ಜೀವ ಕಳೆದುಕೊಂಡ ಪ್ರೇಮಿಗಳು..!

Related Video