Asianet Suvarna News Asianet Suvarna News
breaking news image

ಪೊಲೀಸ್ ಚೌಕಿಗೆ ಡಿಕ್ಕಿಹೊಡೆಸಿ 'ಫನ್' ಮಾಡಿದ್ದ ಪುಂಡ ಸಿಕ್ಕಿಬಿದ್ದ!

ಫನ್ ವರ್ಲ್ಡ್ ಮಾಲೀಕನ ಮಗನಿಂದ ಫನ್? ಬೇಕಂತಲೇ ಕಾರು ಡಿಕ್ಕಿ ಹೊಡೆಸಲಾಯಿತಾ? ಕಬ್ಬನ್ ಪಾರ್ಕ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ/ ಆರೋಪಿಯನ್ನು ಬಂಧಿಸಿದ ಪೊಲೀಸರು

ಬೆಂಗಳೂರು[ಫೆ. 09]  ಬೆಂಗಳೂರಿನಲ್ಲಿ ಪೊಲೀಸ್ ಚೌಕಿಗೆ ಐಷಾರಾಮಿ ಕಾರು ಡಿಕ್ಕಿ ಮಾಡಿಸಿದ್ದ ದುಷ್ಕರ್ಮಿಯನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.  ಫನ್ ವರ್ಲ್ಡ್ ಓನರ್ ಮಗ ಸನ್ನಿ ಎಂಬಾತನಿಂದ ಉದ್ದೇಶಪೂರ್ವಕವಾಗಿ ಕೃತ್ಯ ನಡೆಸಿದ್ದ ಎಂಬ ಆರೋಪ ಕೇಳಿಬಂದಿತ್ತು. 

ಹಿಟ್ ಆ್ಯಂಡ್ ರನ್ ; ಬೈಕ್ ಗೆ ಡಿಕ್ಕಿ ಹೊಡೆದು ಪ್ರಭಾವಿ ಶಾಸಕನ ಪುತ್ರನ ಕಾರು ಎಸ್ಕೇಪ್

ಸುವರ್ಣನ್ಯೂಸ್ ಗೆ ಟ್ರಾಫಿಕ್ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಸ್ಪಷ್ಟನೆ ನೀಡಿದ್ದಾರೆ. ಅಪಘಾತ ಮಾಡಿ ಥಮ್ಸ್ ಅಪ್ ಮಾಡಿದ ಪೋಟೋ ಅಪ್ ಲೋಡ್ ಮಾಡಿದ್ದವ ಸಿಕ್ಕಿಬಿದ್ದಿದ್ದಾನೆ.

Video Top Stories