Asianet Suvarna News Asianet Suvarna News

ಪ್ರಭಾವಿ ಶಾಸಕರ ಪುತ್ರನ ಹಿಟ್ ಆ್ಯಂಡ್ ರನ್, ಬೈಕ್ ಗೆ ಗುದ್ದಿದ ಲ್ಯಾಂಬೋರ್ಗಿನಿ ಎಸ್ಕೇಪ್

ಬೈಕ್‌ಗೆ ಗುದ್ದಿದ ಪ್ರಭಾವಿ ಶಾಸಕನ ಪುತ್ರನ ಕಾರು/ ಹಿಟ್ ಆ್ಯಂಡ್ ರನ್ ಕೇಸ್/ ಗಾಯಾಳುಗಳನ್ನು ವಿಚಾರಿಸದೇ ಎಸ್ಕೇಪ್/ ಮೇಖ್ರಿ ವೃತ್ತದ ಅಂಡರ್ ಪಾಸ್ ನಲ್ಲಿ ಘಟನೆ

ಬೆಂಗಳೂರು[ಫೆ. 09]  ಬೈಕ್ ಹಾಗೂ ಕಾರಿಗೆ ಡಿಕ್ಕಿ ಹೊಡೆದ ಪ್ರಭಾವಿ ಶಾಸಕರೊಬ್ಬರ ಪುತ್ರನ ಲ್ಯಾಂಬೋರ್ಗಿನಿ ಬ್ರೆನ್ಟ್ಲಿ ಕಾರು ಪರಾರಿಯಾಗಿದೆ ಎನ್ನಲಾಗಿದೆ. ಕಾರಿನಲ್ಲಿದ್ದವರು ಗಾಯಾಳುಗಳನ್ನು ವಿಚಾರಿಸುವ ಗೋಜಿಗೂ ಹೋಗಿಲ್ಲ.

ಸಿಸಿಟಿವಿಯಲ್ಲಿ ಸೆರೆಯಾದ ಚಿಕ್ಕಮಗಳೂರಿನ ಘೋರ ಅಪಘಾತದ ದೃಶ್ಯ

ಬೆಂಗಳೂರಿನ ಮೇಖ್ರಿ ವೃತ್ತದ ಅಂಡರ್ ಪಾಸ್ ಬಳೀ ಮೊದಲು ಬೈಕ್ ಗೆ ತಗುಲಿ ನಂತರ ಕಾರಿಗೆ ಡಿಕ್ಕಿ ಹೊಡೆದ ಕಾರು ಎಸ್ಕೇಪ್ ಆಗಿದೆ. ಗಾಯಾಳುವನ್ನು ಎಂಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ.  ಲ್ಯಾಂಬೋರ್ಗಿನಿ  ಜತೆಗೆ ನಾಲ್ಕು ಕಾರುಗಳಲ್ಲಿ ಪ್ರಭಾವಿ ಶಾಸಕನ ಪುತ್ರ ಸೇರಿದಂತೆ ತಂಡ ಬರುತ್ತಿತ್ತು.